ನ್ಯೂಯಾರ್ಕ್: ‘ಅಮೆರಿಕದ ಅಧ್ಯಕ್ಷರು ಜಗತ್ತಿನ ಪ್ರಭಾವಿ ವ್ಯಕ್ತಿ ಇರಬಹುದು, ಆದರೆ, ಸಂವಿಧಾನ ಅವರಿಗಿಂತಲೂ ಶಕ್ತಿಶಾಲಿಯಾದದ್ದು. ಸಂವಿಧಾನ ಗೆಲ್ಲಲಿ.’

ಹೀಗೆಂದವರು ಟ್ರಂಪ್ ಸುಂಕ ಅಕ್ರಮದ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಿ, ಐತಿಹಾಸಿಕ ತೀರ್ಪಿಗೆ ಕಾರಣರಾದ ಭಾರತೀಯ –ಅಮೆರಿಕನ್ ವಕೀಲ ನೀಲ್ ಕಟ್ಯಾಲ್.

ಭಾರತೀಯ ವಲಸಿಗ ದಂಪತಿ ಪುತ್ರನಾಗಿ 1970ರಲ್ಲಿ ಷಿಕ್ಯಾಗೊದಲ್ಲಿ ಜನಿಸಿದ ಕಟ್ಯಾಲ್, ಸದ್ಯ ಅಮೆರಿಕದ ಬಹುರಾಷ್ಟ್ರೀಯ ಕಾನೂನು ಸಂಸ್ಥೆ ಮಿಲ್ಬ್ಯಾಂಕ್ ಎಲ್ಎಲ್ಪಿಯ ವಾಷಿಂಗ್ಟನ್ ಡಿ.ಸಿ ಕಚೇರಿಯ ಪಾಲುದಾರರಾಗಿದ್ದಾರೆ. ಅತ್ಯಂತ ಸಂಕೀರ್ಣವಾದ ವಾಣಿಜ್ಯ ಪ್ರಕರಣಗಳನ್ನು ನಿರ್ವಹಿಸುವ ಲಿಟಿಗೇಶನ್ ಆ್ಯಂಡ್ ಆರ್ಬಿಟ್ರೇಷನ್ ಗ್ರೂಪ್ನ ಸದಸ್ಯರೂ ಆಗಿದ್ದಾರೆ.

ಟ್ರಂಪ್ ಸುಂಕ ನೀತಿಯ ವಿರುದ್ಧ ಲಿಬರ್ಟಿ ಜಸ್ಟೀಸ್ ಸೆಂಟರ್ ಕಾನೂನು ಹೋರಾಟ ನಡೆಸಿತ್ತು. ಇತರರು ಹಿಂಜರಿದಾಗ ಹೋರಾಟವನ್ನು ಮುನ್ನಡೆಸಿದ ಲಿಬರ್ಟಿ ಜಸ್ಟೀಸ್ ಸೆಂಟರ್ನ ನಾಯಕತ್ವಕ್ಕೆ ಕಟ್ಯಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

‘ಹೆಚ್ಚುವರಿ ಸುಂಕ ವಿಧಿಸುವ ಅಧಿಕಾರ ಅಮೆರಿಕದ ಸಂಸತ್ತಿಗೆ ಇದೆಯೇ ಹೊರತು, ಅಧ್ಯಕ್ಷರಿಗೆ ಇಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ನೀಲ್ ಕಟ್ಯಾಲ್ ಅದನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೋಂಡು, ‘ಸಂವಿಧಾನದ ‘ಗೆಲುವು’ ಎಂದು ಬರೆದುಕೊಂಡಿದ್ದಾರೆ.

‘ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂದು ಅತ್ಯಂತ ಮಹತ್ವದ ಸಂಗತಿ ನಡೆದಿದೆ. ವಲಸಿಗನ ಮಗನೊಬ್ಬ ನ್ಯಾಯಾಲಯಕ್ಕೆ ಹೋಗಿ ಅಮೆರಿಕದ ಸಣ್ಣ ವ್ಯಾಪಾರಿಗಳ ಪರವಾಗಿ, ‘ಹೇ ಈ ಅಧ್ಯಕ್ಷರು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ’ ಎಂದು ಹೇಳಲು ಸಾಧ್ಯವಾಯಿತು’ ಎಂದು ಕಟ್ಯಾಲ್ ಅಮೆರಿಕದ ಎಂಎಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟದ್ದಾರೆ.

‘ಅಮೆರಿಕದ ಇತಿಹಾಸದಲ್ಲೇ ಈ ತೀರ್ಪು ಅಪರೂಪದ್ದು. ನೀವು ವಿಶ್ವದಲ್ಲೇ ಅತ್ಯಂತ ಪ್ರಭಾವಿ ವ್ಯಕ್ತಿ ಆಗಿರಬಹುದು, ಆದರೆ, ಸಂವಿಧಾನವನ್ನು ಉಲ್ಲಂಘಿಸಲು ಸಾಧ್ಯವಿಲ್ಲ’ ಎನ್ನುವುದನ್ನು ಈ ತೀರ್ಪು ಹೇಳಿದೆ’ ಎನ್ನುವುದು ಕಟ್ಯಾಲ್ ಅವರ ಸ್ಪಷ್ಟ ನುಡಿ.

56 ಸಂಕೀರ್ಣ ಪ್ರಕರಣಗಳಲ್ಲಿ ಗೆಲುವು

ಯಾಲೆ ಲಾ ಸ್ಕೂಲ್ನಿಂದ ಕಾನೂನು ಪದವಿ ಪಡೆದಿರುವ ಕಟ್ಯಾಲ್ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಅಲ್ಲಿನ ಹಂಗಾಮಿ ಸಾಲಿಸಿಟರ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಅಮೆರಿಕದ ಮುಖ್ಯ ನ್ಯಾಯಮೂರ್ತಿಯವರು ಕಟ್ಯಾಲ್ ಅವರನ್ನು 2011 ಮತ್ತು 2014ರಲ್ಲಿ ಅಲ್ಲಿನ ಫೆಡರಲ್ ಮೇಲ್ಮನವಿ ನಿಯಮಗಳ ಸಲಹಾ ಸಮಿತಿಗೆ ನೇಮಿಸಿದ್ದರು.

ನ್ಯಾಯಾಂಗ ಇಲಾಖೆಯ ಅಟಾರ್ನಿ ಜನರಲ್ ಕಚೇರಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಅಮೆರಿಕದ ಕಾನೂನು ಇಲಾಖೆ ನೀಡುವ ಅತ್ಯುನ್ನತ ನಾಗರಿಕ ಗೌರವ ‘ಎಡ್ಮಂಡ್ ರಾಂಡೋಲ್ಫ್ ಪ್ರಶಸ್ತಿ’ಯೂ ಅವರಿಗೆ ಲಭಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಅತ್ಯಂತ ಸಂಕೀರ್ಣವಾದ 56 ಪ್ರಕರಣಗಳಲ್ಲಿ ವಾದಿಸಿ ಗೆಲುವು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.