ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ತನಿಖಾ ಸಂಸ್ಥೆ ಸಿಐಎಗೆ ಭಾರತ ಮೂಲದ ನಂದ ಮೂಲ್‌ಚಂದಾನಿ ನೇಮಕ

Last Updated 1 ಮೇ 2022, 14:23 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ತನಿಖಾ ಸಂಸ್ಥೆ ಸೆಂಟ್ರಲ್‌ ಇಂಟಲಿಜೆನ್ಸ್ ಏಜೆನ್ಸಿಯ (ಸಿಐಎ) ಮುಖ್ಯ ತಾಂತ್ರಿಕ ಅಧಿಕಾರಿಯಾಗಿ (ಸಿಟಿಒ) ಭಾರತ ಮೂಲದ ನಂದ ಮೂಲ್‌ಚಂದಾನಿ ಅವರು ನೇಮಕವಾಗಿದ್ದಾರೆ.

ಮೂಲ್‌ಚಂದಾನಿ ಅವರು ಸಿಲಿಕಾನ್ ವ್ಯಾಲಿ ಮತ್ತು ದೇಶದ ಭದ್ರತಾ ಇಲಾಖೆಯಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಒಬ್ಲಿಕ್ಸ್, ಡೆಟರ್ಮಿನಾ, ಒಪನ್‌ಡಿಎನ್ಎಸ್ ಮತ್ತು ಸ್ಕೇಲ್ಎಕ್ಸ್ಟ್ರೀಮ್ ಸೇರಿದಂತೆ ಕೆಲವು ಸ್ಟಾರ್ಟಪ್‌ಗಳ ಸಂಸ್ಥಾಪಕರಾಗಿದ್ದ ನಂದ ಮೂಲ್‌ಚಂದಾನಿ ಅವರು ಈಗ ಸಂಸ್ಥೆಯ ಸಿಟಿಒ ಆಗಿ ನೇಮಕವಾಗಿದ್ದಾರೆ ಎಂದು ಸಿಐಎ ಭಾನುವಾರ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT