ವಾಷಿಂಗ್ಟನ್: ಭಾರತ ಮೂಲದ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಅವರಿಗೆ 'ಡಿಸ್ಟಿಂಗ್ವಿಷ್ಡ್ ಲೀಡರ್‌ಶಿಪ್ ಅವಾರ್ಡ್' (ವಿಶೇಷ ನಾಯಕತ್ವ) ನೀಡಿ ಗೌರವಿಸಲಾಗಿದೆ.
ಅನುಪಮ ಸಾರ್ವಜನಿಕ ಸೇವೆ ಮತ್ತು ವೃತ್ತಿ ಬದುಕಿನ ಯಶಸ್ಸನ್ನು ಗುರುತಿಸಿ 48 ವರ್ಷದ ರಾಜಾ ಕೃಷ್ಣಮೂರ್ತಿ ಅವರಿಗೆ ಈ ಗೌರವ ನೀಡಲಾಗಿದೆ. ಇಲಿನಾಯಿಸ್‌ನ ಮುಖ್ಯ ಕಾರ್ಯದರ್ಶಿ ಜೆಸ್ಸಿ ವೈಟ್ ಅವರು ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಡೆಮಕ್ರಾಟಿಕ್ ಪಾರ್ಟಿಯ ನಾಯಕರಾಗಿರುವ ಕೃಷ್ಣಮೂರ್ತಿ ಅವರು 2017ರಿಂದ ಇಲಿನಾಯಿಸ್‌ನ 8ನೇ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ.