ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಇಂಗಾಲದ ಮೊನಾಕ್ಸೈಡ್‌ನಿಂದ ಭಾರತೀಯ ಮೂಲದ ವಿದ್ಯಾರ್ಥಿ ಸಾವು

Published 22 ಡಿಸೆಂಬರ್ 2023, 14:48 IST
Last Updated 22 ಡಿಸೆಂಬರ್ 2023, 14:48 IST
ಅಕ್ಷರ ಗಾತ್ರ

ಒಟ್ಟಾವ: ಮನೆಯ ಗ್ಯಾರೇಜಿನಲ್ಲಿ ಕಾರಿನ ಎಂಜಿನ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಹೊರಸೂಸಿದ ಇಂಗಾಲದ ಮೊನಾಕ್ಸೈಡ್‌ ಅನಿಲ ಸೇವನೆಯಿಂದ 25 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನೆಲೆಸಿದ್ದ ವಿದ್ಯಾರ್ಥಿ, ಮನೆಯ ಗ್ಯಾರೇಜಿನಲ್ಲಿ ಕಾರು ನಿಲ್ಲಿಸಿದ್ದರು. ಎಂಜಿನ್ ಬಂದ್ ಮಾಡಿರಲಿಲ್ಲ. ನಿರಂತರವಾಗಿ ಎಂಜಿನ್‌ ಚಾಲ್ತಿಯಲ್ಲಿದ್ದ ಕಾರಣ, ಮನೆಯೊಳಗೆ ಸಾಕಷ್ಟು ಪ್ರಮಾಣದ ಇಂಗಾಲದ ಮೊನಾಕ್ಸೈಡ್ ಶೇಖರಣೆಯಾಗಿತ್ತು. ಇದರಿಂದ ವಿದ್ಯಾರ್ಥಿಯ ಸಾವು ಸಂಭವಿಸರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಮನೆಯಲ್ಲಿ ಅಡುಗೆ ಅನಿಲ ಸೋರಿಕೆ ಸಂಭವಿಸಿದೆ ಎಂಬ ಕರೆ ಆಧರಿಸಿ ತುರ್ತು ಸೇವೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಮನೆಯಲ್ಲಿ ಇಂಗಾಲದ ಮೊನಾಕ್ಸೈಡ್‌ ಹರಡಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

‘ಇದು ವಾಹನದಿಂದ ಹೊರಹೊಮ್ಮಿದ ಹೊಗೆಯಿಂದಲೇ ಸಂಭವಿಸಿರುವ ಸಾಧ್ಯತೆ ಇದೆ. ಪ್ರಕರಣ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT