ಸಿಂಗಪುರ: ಸಿಂಗಪುರದಲ್ಲಿ ವಿಲಾಸಿ ವಸ್ತುಗಳನ್ನು ಖರೀದಿಸುವವರಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಇದರಿಂದ ದೇಶದ ಆರ್ಥಿಕತೆಯ ವೃದ್ಧಿಗೆ ನೆರವಾಗುತ್ತಿದೆ ಎಂದು ಪ್ರಮುಖ ವ್ಯಾಪಾರ ಸಂಘಟನೆಯೊಂದು ಸೋಮವಾರ ತಿಳಿಸಿದೆ.

ಸಿಂಗಪುರ ಪ್ರವಾಸೋದ್ಯಮ ಮಂಡಳಿಯ ಅಂಕಿಅಂಶಗಳ ಪ್ರಕಾರ, 2025ರ ಮೊದಲಾರ್ಧದಲ್ಲಿ ಭಾರತೀಯ ಪ್ರವಾಸಿಗರು ಸಿಂಗಪುರದಲ್ಲಿ ₹5,170 ಕೋಟಿಗೂ (812.17 ದಶಲಕ್ಷ ಸಿಂಗಪುರ ಡಾಲರ್) ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಕಳೆದ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ, ಈ ಪ್ರಮಾಣ ಶೇ 4.40ರಷ್ಟು ಹೆಚ್ಚಳವಾಗಿದೆ.

ಭಾರತೀಯ ಪ್ರವಾಸಿಗರಿಗೆ ಸಿಂಗಪುರವು ಪ್ರಮುಖ ವಾಣಿಜ್ಯ ಮಾರುಕಟ್ಟೆಗಳಲ್ಲಿ ಒಂದು. ಐಷಾರಾಮಿ ವಸ್ತುಗಳಿಗೆ ಇಲ್ಲಿ ಹೆಚ್ಚು ಖರ್ಚು ಮಾಡುತ್ತಾರೆ ಮತ್ತು ಪ್ರವಾಸದ ಅವಧಿಯೂ ಸರಾಸರಿ 6 ದಿನಗಳದ್ದಾಗಿರುತ್ತದೆ. ಈ ಅವಧಿಯಲ್ಲಿ ಖರೀದಿ, ಆಹಾರ, ಮನೋರಂಜನೆ ಮತ್ತು ವಸತಿ ಸೇವೆಗೆ ಹೆಚ್ಚು ವ್ಯಯಿಸುತ್ತಾರೆ ಎಂದು ಆರ್ಚರ್ಡ್ ರಸ್ತೆ ವ್ಯವಹಾರ ಸಂಘದ (ಒಆರ್ಬಿಎ) ಮುಖ್ಯಸ್ಥ ಮಾರ್ಕ್ ಷಾ ಅವರು ತಿಳಿಸಿದ್ದಾರೆ.

ಭಾರತದ ಪ್ರವಾಸಿಗರನ್ನು ಹೊರತುಪಡಿಸಿ, ಚೀನಾ ಮತ್ತು ಇಂಡೋನೇಷ್ಯಾ ಪ್ರವಾಸಿಗರು ಕೂಡ ದುಬಾರಿ ವಸ್ತುಗಳನ್ನು ಖರೀದಿಸುವ ಮೂಲಕ ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಿದ್ದಾರ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.