ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ–ಸ್ಯಾಟ್‌’: ಗಗನಯಾತ್ರಿಗಳಿಗೆ ಅಪಾಯ: ಅಮೆರಿಕ

ಬಾಹ್ಯಾಕಾಶ ನಿಲ್ದಾಣದಲ್ಲಿ ತ್ಯಾಜ್ಯದ ಚೂರು ಹರಡಿದ ಭಾರತದ ಕ್ಷಿಪಣಿ ನಿಗ್ರಹ ಉಪಗ್ರಹ: ನಾಸಾ
Last Updated 2 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತ ನಡೆಸಿರುವ ಉಪಗ್ರಹ ನಾಶದಿಂದ ಅಂತರಿಕ್ಷದಲ್ಲಿ 400 ಚೂರು ತ್ಯಾಜ್ಯ ಸೃಷ್ಟಿಯಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದತ್ತ(ಐಎಸ್‌ಐ) ಸಾಗುವ ಗಗನಯಾತ್ರಿಗಳಿಗೆ ಹೊಸ ಅಪಾಯ ಎದುರಾದಂತಾಗಿದೆ ಎಂದು ನಾಸಾ ಮಂಗಳವಾರ ಹೇಳಿದೆ.

ಕೆಳಗಿನ ಕಕ್ಷೆಯಲ್ಲಿದ್ದ ತನ್ನದೇ ಉಪಗ್ರಹವನ್ನು ಭಾರತವು ಕ್ಷಿಪಣಿ ಬಳಸಿ ನಾಶಪಡಿಸಿದ ಐದು ದಿನಗಳ ಬಳಿಕ ನಾಸಾ ಆಡಳಿತ ಮುಖ್ಯಸ್ಥ ಜಿಮ್‌ ಬ್ರಿಡನ್‌ಸ್ಟೈನ್‌ ಈಹೇಳಿಕೆನೀಡಿದ್ದಾರೆ.

ಭಾರತದ ನಡೆಸಿರುವ ಪರೀಕ್ಷೆಯಿಂದ ಕಳೆದ 10 ದಿನಗಳಲ್ಲಿ ಐಎಸ್‌ಐಗೆ ಎದುರಾಗುವ ಅಪಾಯದ ಪ್ರಮಾಣ ಶೇ 44ರಷ್ಟು ಹೆಚ್ಚಿದೆ. ಆದರೆ, ತ್ಯಾಜ್ಯ ವಾತಾವರಣ ವಲಯವನ್ನು ಪ್ರವೇಶಿಸುತ್ತಿದ್ದಂತೆದಹಿಸುವ ಪ್ರಕ್ರಿಯೆಯಿಂದಾಗಿ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ ಎನ್ನಲಾಗಿದೆ.

‘ಉಪಗ್ರಹದ ಎಲ್ಲ ತುಂಡುಗಳನ್ನೂ ಪ‌ತ್ತೆ ಮಾಡುವಷ್ಟು ದೊಡ್ಡದಾಗಿಲ್ಲ. ಪ್ರಸ್ತುತ 10 ಸೆಂ.ಮೀ ಅಥವಾ ಅದಕ್ಕಿಂತಲೂ ದೊಡ್ಡದಾದ, ಸುಮಾರು 60 ಚೂರುಗಳನ್ನು ಪತ್ತೆ ಮಾಡಲಾಗಿದೆ’ ಎಂದು ಜಿಮ್‌ ಹೇಳಿದ್ದಾರೆ.

ಭಾರತ ನಾಶ ಪಡಿಸಿರುವ ಉಪಗ್ರಹವು ಐಎಸ್‌ಐದಿಂದ ಹಾಗೂ ಬಹುತೇಕ ಉಪಗ್ರಹಗಳು ಸುತ್ತುತ್ತಿರುವ ಕಕ್ಷೆಗಿಂತಲೂ ಕೆಳ ಮಟ್ಟದಲ್ಲಿ, ಅಂದರೆ ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿತ್ತು.

’ಸುಮಾರು 24 ಚೂರುಗಳು ಐಎಸ್‌ಐಗಿಂತಲೂ ಎತ್ತರದ ಮಟ್ಟಕ್ಕೆ ಸಾಗಿವೆ. ಹೀಗೆ,ಐಎಸ್‌ಐಗಿಂತ ಮೇಲಕ್ಕೆ ತ್ಯಾಜ್ಯ ರವಾನಿಸಬಹುದಾದ ಕಾರ್ಯಕ್ರಮವನ್ನು ಸೃಷ್ಟಿಸುವುದು ಅತ್ಯಂತ ಕೆಟ್ಟ ಸಂಗತಿ. ಅಂತರಿಕ್ಷದಲ್ಲಿ ಅಂಥ ಚಟುವಟಿಕೆಗಳಿಂದ ಭವಿಷ್ಯದಲ್ಲಿಗಗನಯಾತ್ರೆಗೆ ಪೂರಕವಾದುದಲ್ಲ’ ಎಂದಿದ್ದಾರೆ.

ಉಪಗ್ರಹಗಳು ಹಾಗೂ ಐಎಸ್‌ಐಗೆ ಅಂತರಿಕ್ಷದಲ್ಲಿ ಈಚೂರುಗಳು ಡಿಕ್ಕಿಯಾಗದಂತೆ ತಡೆಯಲು ಅಮೆರಿಕಗಮನ ಹರಿಸುತ್ತಿದೆ. ಈವರೆಗೂಅಮೆರಿಕ 10 ಸೆಂ.ಮೀ.ಗಿಂತಲೂ ದೊಡ್ಡದಾದ ಸುಮಾರು 23,000 ವಸ್ತುಗಳು ಪತ್ತೆ ಮಾಡಿದೆ. ಇವು
ಗಳಲ್ಲಿ ಅಂತರಿಕ್ಷ ತ್ಯಾಜ್ಯದ ಪಾಲು 10,000 ಚೂರುಗಳು.

ಭೂಮಿಯಿಂದ 530 ಮೈಲಿ ದೂರದಲ್ಲಿ ಚೀನಾ 2007ರಲ್ಲಿ ಕೈಗೊಂಡ ಉಪಗ್ರಹ ನಾಶ ಪರೀಕ್ಷೆಯಿಂದ 3,000 ಚೂರು ತ್ಯಾಜ್ಯ ಸೃಷ್ಟಿಯಾಗಿತ್ತು. ಒಂದೇ ಚಟುವಟಿಕೆಯಿಂದ ದೊಡ್ಡ ಮಟ್ಟದಲ್ಲಿ ತ್ಯಾಜ್ಯ ಅಂತರಿಕ್ಷದ ವಲಯವನ್ನು ಸೇರಿತ್ತು. ಕ್ಷಿಪಣಿ ಪರೀಕ್ಷೆಯ ಮೂಲಕ ಭಾರತ ಜಗತ್ತಿನಲ್ಲಿ ಅತ್ಯಾಧುನಿಕ ಗಗನಶಕ್ತಿ ಹೊಂದಿರುವ ರಾಷ್ಟ್ರಗಳ (ಅಮೆರಿಕ, ರಷ್ಯಾ ಮತ್ತು ಚೀನಾ) ಜೊತೆಗೆ ತನ್ನ ಹೆಸರನ್ನೂ ಸೇರ್ಪಡೆಗೊಳಿಸಿಕೊಂಡಿತ್ತು.

‘ಉಪಗ್ರಹ ನಿಗ್ರಹ ಪರೀಕ್ಷೆ ನಡೆಸುವ ಮೂಲಕ ಭಾರತವು ಯಾವುದೇ ಅಂತರರಾಷ್ಟ್ರೀಯ ನಿಯಮ ಅಥವಾ ಒಪ್ಪಂದವನ್ನು ಉಲ್ಲಂಘಿಸಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು. 2000ನೇ ವರ್ಷದ ನವೆಂಬರ್‌ನಿಂದಈವರೆಗೆ 18 ದೇಶಗಳ 236 ಗಗನಯಾತ್ರಿಗಳು ಐಎಸ್‌ಐಗೆ ಭೇಟಿ ನೀಡಿದ್ದಾರೆ.

‘ಐಎಸ್‌ಐ ಈಗಲೂ ಸುರಕ್ಷಿತವಾಗಿದೆ. ಆದರೆ, ಉಪಗ್ರಹ ನಿಗ್ರಹದಂತಹ ಪರೀಕ್ಷೆಗಳು ಹೀಗೆ ನಡೆಯುತ್ತಿದ್ದರೆ ಅದರ ಸುರಕ್ಷತೆ ಪ್ರಮಾಣ ಖಂಡಿತ ಕ್ಷೀಣಿಸಲಿದೆ’ ಎಂದು ಬ್ರಿಡನ್‌ಸ್ಟೈನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT