ಪಲು:ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ 832ಕ್ಕೇರಿದೆ.

ಆಹಾರ ಮತ್ತು ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ನಿರಾಶ್ರಿತರು ಹರಸಾಹಸ ಮಾಡುತ್ತಿದ್ದಾರೆ. ಸಾವಿನ ಸಂಖ್ಯೆ ಸಾವಿರವನ್ನೂ ಮೀರಬಹುದು ಎಂದು ಇಂಡೊನೇಷ್ಯಾ ಉಪಾಧ್ಯಕ್ಷ ಜುಸೂಫ್ ಕಲ್ಲಾ ಹೇಳಿದ್ದಾರೆ.

ಸುನಾಮಿಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು,ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.

ಹಾನಿಗೊಳಗಾದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ, ‘ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೇನಾ ಪಡೆಗಳು ಹಗಲಿರುಳು ಶ್ರಮಿಸಬೇಕು’ ಎಂದು ಹೇಳಿದ್ದಾರೆ.

ಸೇನಾ ವಿಮಾನದ ಮೂಲಕ ಸಂತ್ರಸ್ತರಿಗೆ ಆಹಾರ ಹಾಗೂ ಪರಿಹಾರ ಸಾಮಗ್ರಿಯನ್ನು ವಿತರಿಸಲಾಗುತ್ತಿದೆ.

ಫೇಸ್‌ಬುಕ್ ಬಳಕೆ: ಕಣ್ಮರೆಯಾದವರನ್ನು ಹುಡುಕುವ ಕಾರ್ಯದಲ್ಲಿಇಂಡೊನೇಷ್ಯಾ ಸೇನೆ ನಿರತವಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ಆತಂಕದಲ್ಲಿರುವ ನಿರಾಶ್ರಿತರ ಅನುಕೂಲಕ್ಕಾಗಿ ಫೇಸ್‌ಬುಕ್ ಪುಟವನ್ನು ತೆರೆಯಲಾಗಿದೆ. ಪತ್ತೆಯಾದವರ ಮಾಹಿತಿಯನ್ನು ಈ ಪುಟದಲ್ಲಿ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.