ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿಯ ಪವಿತ್ರ ಮರದ ಮುಂದೆ ನಗ್ನ ಫೋಟೊಕ್ಕೆ ಪೋಸ್ ಕೊಟ್ಟ ರಷಿಯನ್ ಬಾಲೆ!

ಜೈಲಿಗೆ ಟಿಕ್‌ಟಾಕ್ ಸ್ಟಾರ್
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್‌ ವಿಡಿಯೊಗಳನ್ನು ಮಾಡುತ್ತಾ ಅನೇಕ ಯುವಕ ಯುವತಿಯರು ಕೆಲ ಸಲ ಅತಿರೇಕದಿಂದ ವರ್ತಿಸಿ ಸುದ್ದಿಯಾಗುತ್ತಿದ್ದಾರೆ.

ಇದೇ ರೀತಿ ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊಗಳನ್ನು ಮಾಡುತ್ತಾ ಹೆಸರು ಗಳಿಸಿದ್ದ ರಷ್ಯಾದ ಯುವತಿಯೊಬ್ಬಳು ಹೋದಲ್ಲಿ ಬಂದಲ್ಲಿ ಹೇಗೆ ಇರಬೇಕು ಎಂಬ ಜ್ಞಾನವಿಲ್ಲದೇ ಈಗ ತೊಂದರೆಗೆ ಸಿಲುಕಿಕೊಂಡಿದ್ದಾಳೆ.

ತನ್ನ ಗೆಳೆಯನೊಡನೆ ಇಂಡೋನೇಷಿಯಾದ ಬಾಲಿಗೆ ಬೇಟಿ ನೀಡಿದ್ದ ಯುವತಿ ಅಲಿನಾ ಫಾಜ್‌ಲೀವಾ ಬಾಲಿ ಪಕ್ಕದಲ್ಲಿರುವ ತಬನಾಮ್ ಬಳಿ ಇರುವ ಹಾಗೂ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಬಾಬಕಾನ್ ಮಂದಿರದ ಪವಿತ್ರ ಮರವೊಂದಕ್ಕೆ ತೆರಳಿ ಅಲ್ಲಿ ಬೆತ್ತಲೆಯಾಗಿ ಫೋಟೊಗಳನ್ನು ತೆಗೆದುಕೊಂಡಿದ್ದಳು. ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲೂ ಕೂಡ ಹಂಚಿಕೊಂಡಿದ್ದಳು.

ಫೋಟೊಗಳು ವೈರಲ್ ಆದ ನಂತರ ತಬನಾಮ್ ಜನತೆ ಕೆಂಡಾಮಂಡಲವಾಗಿ ತಮ್ಮ ದೇಶದ ಪವಿತ್ರಮರದ ಮುಂದೆ ಅಸಭ್ಯ ವರ್ತನೆ ತೋರಿದ ಯುವತಿಯನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

ಯುವತಿಅಲಿನಾ ಫಾಜ್‌ಲೀವಾ ಅವರಿಗೆ ಬಾಲಿ ಸ್ಥಳೀಯ ಕೋರ್ಟ್ 6 ವರ್ಷ ಸೆರೆವಾಸ ಹಾಗೂ ₹78,000 ದಂಡ ವಿಧಿಸಿದ್ದಾರೆ. ಮಾಡಿದ ತಪ್ಪಿಗೆ ಜೈಲು ಸೇರಿರುವ ಅಲಿನಾ, ತನ್ನದು ದೊಡ್ಡ ತಪ್ಪಾಗಿದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಬಾಲಿ ಪೊಲೀಸರೆದುರು ಗೋಗರೆದಿದ್ದಾಳೆ.

ಅಂದಹಾಗೇಅಲಿನಾ ಫಾಜ್‌ಲೀವಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 16 ಸಾವಿರಕ್ಕೂ ಹೆಚ್ಚು ಹಿಂಬಾಲಿಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT