ಟೆಹರಾನ್: 'ನಾವು ಯುದ್ಧಕ್ಕೆ ತಯಾರಿದ್ದೇವೆ. ಹಾಗೆಯೇ, ಮಾತುಕತೆ ನಡೆಸಲೂ ಸಿದ್ಧರಿದ್ದೇವೆ' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರ್ಗಾಚಿ ಹೇಳಿದ್ದಾರೆ.

'ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಒಡ್ಡಿದ ಬೆನ್ನಲ್ಲೇ, ಇರಾನ್ ನಾಯಕತ್ವವು ಮಾತುಕತೆಗೆ ಮನವಿ ಮಾಡಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದರು. ಇದಕ್ಕೆ ಅಬ್ಬಾಸ್ ಪ್ರತಿಕ್ರಿಯಿಸಿದ್ದಾರೆ.

ಇರಾನ್ನಲ್ಲಿ ಹಣದುಬ್ಬರ, ಏರುತ್ತಿರುವ ಜೀವನ ವೆಚ್ಚದ ವಿರುದ್ಧ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಇದುವರೆಗೆ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಲ್ಲಿ, 40 ಮಂದಿ ಭದ್ರತಾ ಸಿಬ್ಬಂದಿ ಎನ್ನಲಾಗಿದೆ.

ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಇರಾನ್ನಲ್ಲಿ ಹತ್ಯಾಕಾಂಡ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದವು. ಈ ಕುರಿತು ಏರ್ ಫೋರ್ಸ್ ಒನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, 'ಇರಾನ್ ನಾಯಕರು ಕರೆ ಮಾಡಿದ್ದರು. ಸಭೆಗೆ ಸಿದ್ಧತೆ ನಡೆಯುತ್ತಿದೆ' ಎಂದು ತಿಳಿಸಿದ್ದರು.

ಇದೀಗ ಅಬ್ಬಾಸ್ ನೀಡಿರುವ ಹೇಳಿಕೆ ಜಾಗತಿಕ ಶಾಂತಿಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ದೇಶದಾದ್ಯಂತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪ್ರತಿಭಟನೆಗಳು ಹಿಂಸಾಚಾರ ಹಾಗೂ ರಕ್ತಪಾತಕ್ಕೆ ತಿರುಗಿರುವುದು ಸಂಘರ್ಷದಲ್ಲಿ ಟ್ರಂಪ್ ಮಧ್ಯಪ್ರವೇಶಿಸಲು ನೆಪವಾಗಿದೆ ಎಂದಿದ್ದಾರೆ.

ಹಾಗೆಯೇ, ಹಿಂಸಾಚಾರದ ವೇಳೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದರ ಕುರಿತು ಅಬ್ಬಾಸ್ ಅವರು ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ.
.ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ.ಬೆದರಿಸಿದ ನಂತರ ಮಾತುಕತೆಗೆ ಮುಂದಾದ ಇರಾನ್: ಡೊನಾಲ್ಡ್ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.