ಇರಾನ್ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಹಣದುಬ್ಬರ, ಜೀವನ ವೆಚ್ಚ ಏರುತ್ತಿರುವುದರ ವಿರುದ್ಧ ಸಣ್ಣಮಟ್ಟದಲ್ಲಿ ಆರಂಭವಾದ ಪ್ರತಿಭಟನೆಗಳು ಆಂದೋಲನದ ಸ್ವರೂಪ ಪಡೆಯುತ್ತಿವೆ. ಪ್ರತಿಭಟನಕಾರರು ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದು, ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತಕ್ಕೆ ತಲೆನೋವಾಗಿದೆ.

ವಿದ್ಯುತ್ ಕಡಿತ, ಇಂಟರ್ನೆಟ್ ಕಡಿತ ಸೇರಿದಂತೆ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಪ್ರತಿಭಟನೆ ಕಡಿಮೆಯಾಗುತ್ತಿಲ್ಲ. ರಾಜಧಾನಿ ಟೆಹರಾನ್, ಮಶಾದ್ ಸೇರಿದಂತೆ ದೇಶದ ಎಲ್ಲಾ 31 ಪ್ರಾಂತ್ಯದಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದು, 100ಕ್ಕೂ ಹೆಚ್ಚಿನ ನಗರಗಳಿಗೆ ಹಬ್ಬಿದೆ. ಪ್ರಮುಖ ನಗರಗಳಲ್ಲಿ ಹಿಂಸಾಚಾರಗಳು ನಡೆದಿವೆ. ಸರ್ಕಾರವು ಪೊಲೀಸರ ಮೂಲಕ ದಮನಕ್ಕೆ ಮುಂದಾಗಿದೆ. ಪ್ರತಿಭಟನಕಾರರಿಗೆ ಗುಂಡಿಕ್ಕಲಾಗುತ್ತಿದೆ. ಹಲವು ತಿಂಗಳಿನಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ, ಎರಡು ವಾರಗಳಿಂದ ಅವು ತೀವ್ರಗೊಂಡಿವೆ. ಇತ್ತೀಚಿನ ತಿಂಗಳುಗಳಲ್ಲಿ ಸಾವಿರಾರು ಮಂದಿ ಸತ್ತು, 30,000ಕ್ಕೂ ಹೆಚ್ಚು ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ಅಮೆರಿಕ ಬೆಂಬಲಿತ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್ (ಸಿಎಚ್ಆರ್ಐ) ಹೇಳಿದೆ. ಇರಾನ್ನಲ್ಲಿ ಹತ್ಯಾಕಾಂಡ ನಡೆಯುತ್ತಿದ್ದು, ಇದನ್ನು ತಡೆಯುವ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ನಡೆಯಬೇಕು ಎಂದು ಅದು ಕರೆ ನೀಡಿದೆ.

ಬಹುತೇಕ ಶಿಯಾಗಳೇ ಇರುವ ಇರಾನ್ನಲ್ಲಿರುವುದು ಧಾರ್ಮಿಕ ಪ್ರಭುತ್ವ. ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಒಬ್ಬ ಧರ್ಮಗುರು. ಮೊದಲ ಬಾರಿಗೆ ಜನರು ದೇವಪ್ರಭುತ್ವದ (ದೇವರ ಹೆಸರಿನಲ್ಲಿ ನಡೆಸಲಾಗುವ ಆಡಳಿತ) ವಿರುದ್ಧ ದೊಡ್ಡ ಮಟ್ಟದಲ್ಲಿ ಬೀದಿಗಿಳಿದಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಕೊರತೆ, ಆರ್ಥಿಕತೆಯ ಕುಸಿತ, ಭ್ರಷ್ಟಾಚಾರ ಪ್ರತಿಭಟನೆಗೆ ಕಾರಣಗಳು ಎನ್ನಲಾಗುತ್ತಿದ್ದು, ಸರ್ಕಾರ ಕಿತ್ತೊಗೆಯುವುದೇ ತಮ್ಮ ಗುರಿ ಎಂದು ಪ್ರತಿಭಟನಕಾರರು ಘೋಷಿಸಿದ್ದಾರೆ.

ಇರಾನ್ ಹಿಂದೆಂದೂ ಇಲ್ಲದ ರೀತಿಯಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಿದ್ದು, ಅದರ ಬೆಂಬಲಕ್ಕೆ ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಇರಾನ್ ಮೇಲೆ ಸೇನಾ ದಾಳಿಯ ಸಾಧ್ಯತೆ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಖಮೇನಿ ಅವರು ಪ್ರತಿಭಟನಕಾರರನ್ನು ದೊಂಬಿಕೋರರು ಎಂದಿದ್ದು, ಅಮೆರಿಕವನ್ನು ಮೆಚ್ಚಿಸಲು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರತಿಭಟನೆಗಳಿಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದಿದ್ದಾರೆ. ಪ್ರತಿಭಟನೆಯನ್ನು ದೈವವಿರೋಧಿ ಕ್ರಿಯೆ ಎಂದು ಪರಿಗಣಿಸಿ, ಮರಣದಂಡನೆ ವಿಧಿಸುವುದಾಗಿ ಅಟಾರ್ನಿ ಜನರಲ್ ಪ್ರಕಟಿಸಿದ್ದಾರೆ.

ಮಹಿಳೆಯರ ಹಕ್ಕುಗಳು, ಜೀವಿಸುವ ಹಕ್ಕು, ಸ್ವಾತಂತ್ರ್ಯಕ್ಕಾಗಿ ಯುವಕ ಯುವತಿಯರು 2022ರಲ್ಲಿ ನಡೆಸಿದ್ದ ಪ್ರತಿಭಟನೆಗಳಿಗಿಂತಲೂ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪದ್ದಾಗಿವೆ. ನೇಪಾಳ, ಬಾಂಗ್ಲಾದಂತೆಯೇ ಇಲ್ಲಿಯೂ ಸರ್ಕಾರ ಪತನಗೊಳ್ಳುವುದೇ ಎನ್ನುವ ಚರ್ಚೆಗಳು ನಡೆಯುತ್ತಿವೆ. ಪ್ರತಿಭಟನಕಾರರ ಕೈ ಮೇಲಾದರೆ, ರಷ್ಯಾಕ್ಕೆ ಪಲಾಯನ ಮಾಡಲು ಖಮೇನಿ ಸಿದ್ಧತೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

46 ವರ್ಷಗಳಿಂದ ‘ದೇವಪ್ರಭುತ್ವ’

ಇರಾನಿನಲ್ಲಿ 1979ರಲ್ಲಿ ಇಸ್ಲಾಂ ಕ್ರಾಂತಿ ನಡೆದು ‘ದೇವಪ್ರಭುತ್ವ’ ಸ್ಥಾಪನೆಗೊಂಡ ನಂತರ ಇಲ್ಲಿಯವರೆಗೂ ಅದೇ ವ್ಯವಸ್ಥೆ ಜಾರಿಯಲ್ಲಿದೆ. ಧರ್ಮಗುರು, ರಾಜಕಾರಣಿ ರುಹೊಲ್ಲಾ ಖೊಮೇನಿ ನೇತೃತ್ವದಲ್ಲಿ ನಡೆದ ಕ್ರಾಂತಿಯಲ್ಲಿ ಅಲ್ಲಿದ್ದ ರಾಜರ ಆಡಳಿತ ಕೊನೆಗೊಂಡಿತು. ಅಂದಿನಿಂದ ಇರಾನ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಆಯಿತು. ಆಡಳಿತದಲ್ಲಿ ಅಧ್ಯಕ್ಷೀಯ ವ್ಯವಸ್ಥೆ (ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ) ಇದ್ದರೂ ‘ಆಯತೊಲ್ಲಾ’ ಎಂಬ ಧಾರ್ಮಿಕ ಪದವಿ ಹೊಂದಿರುವ ಪರಮೋಚ್ಚ ನಾಯಕನ ನೇತೃತ್ವದಲ್ಲಿ ಆಡಳಿತ ನಡೆಯುತ್ತದೆ. ರುಹೊಲ್ಲಾ ಖೊಮೇನಿ ಅವರು 1989ರ ಜೂನ್ 3ರಂದು ನಿಧನರಾದ ಬಳಿಕ ಈಗಿನ ಆಯತೊಲ್ಲಾ ಖಮೇನಿ (ಸೈಯದ್ ಅಲಿ ಹುಸ್ಸೈನಿ ಖಮೇನಿ) ಅವರು ಇರಾನಿನ ಪರಮೋಚ್ಚ ನಾಯಕರಾಗಿದ್ದಾರೆ. 36 ವರ್ಷಗಳಿಂದ ಅವರೇ ಇರಾನಿನ ಆಡಳಿತ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

1979ರಲ್ಲಿ ದೇವಪ್ರಭುತ್ವವಾದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರುಹೊಲ್ಲಾ ಖಮೇನಿ ಅವರು ಇಸ್ಲಾಂ ಧಾರ್ಮಿಕ ನಿಯಮಗಳ ಆಧಾರದಲ್ಲಿ ಜನರ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರಲು ಆರಂಭಿಸಿದರು. ಅಧಿಕಾರಕ್ಕೆ ಬಂದ ಎರಡೇ ವಾರಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಅಲ್ಲಿ ಕಡ್ಡಾಯಗೊಳಿಸಲಾಯಿತು. ಆಗಲೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆನಂತರವೂ ಆಡಳಿತದ ಜನವಿರೋಧಿ ನೀತಿಗಳನ್ನು ಜನರು ವಿರೋಧಿಸುತ್ತಲೇ ಇದ್ದಾರೆ. ಆದರೆ, ಆಡಳಿತ ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಹತ್ತಿಕ್ಕುತ್ತಾ ಬಂದಿದೆ.

ಹೋರಾಟಕ್ಕೆ ರಾಜವಂಶಸ್ಥನ ಬೆಂಬಲ

ಪರ್ಷಿಯಾ ಎಂದು ಕರೆಯುತ್ತಿದ್ದ ಇರಾನ್ನಲ್ಲಿ ಹಿಂದೆ ಇದ್ದುದು ರಾಜರ ಆಡಳಿತ. 1979ರಲ್ಲಿ ಇಸ್ಲಾಂ ಕ್ರಾಂತಿ ನಡೆದಾಗ ಇರಾನ್ನ ಶಾ (ದೊರೆ) ಆಗಿದ್ದವರು, ಮೊಹಮ್ಮದ್ ರೆಝಾ ಪಹ್ಲವಿ. ಅಮೆರಿಕ ಸೇರಿದಂತೆ ಪಶ್ಚಿಮದ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಅಧಿಕಾರ ಕಳೆದುಕೊಂಡ ನಂತರ ಈಜಿಪ್ಟ್ನಲ್ಲಿ ಆಶ್ರಯ ಪಡೆದು, ಕ್ಯಾನ್ಸರ್ನಿಂದ ಮೃತಪಟ್ಟರು. ಅವರ ಮಗ, ಅಮೆರಿಕದ ವಾಷಿಂಗ್ಟನ್ನಲ್ಲಿ ನೆಲಸಿರುವ ರೆಝಾ ಪಹ್ಲವಿ ಅವರು ತಮ್ಮ ದೇಶದಲ್ಲಿ ಪ್ರತಿಭಟನೆ ನಡೆದಾಗಲೆಲ್ಲ, ಹೋರಾಟಗಾರರನ್ನು ಬೆಂಬಲಿಸಿದ್ದಾರೆ. ಈ ಬಾರಿಯೂ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಕರೆ ನೀಡಿದ್ದಾರೆ.

ದೇಶದಲ್ಲಿ ಕ್ರಾಂತಿ ಸಂಭವಿಸುವಾಗ ಪಹ್ಲವಿ ಅವರಿಗೆ 17 ವರ್ಷ. ಪೈಲಟ್ ತರಬೇತಿಗಾಗಿ ಅವರು ಅಮೆರಿಕದ ಟೆಕ್ಸಾಸ್ಗೆ ತೆರಳಿದ್ದರು. ಆ ಬಳಿಕ ಅವರಿಗೆ ಸ್ವದೇಶಕ್ಕೆ ಹಿಂದಿರುಗಲು ಆಗಿಲ್ಲ. ಅಮೆರಿಕದಲ್ಲೇ ವಾಸಿಸುತ್ತಿದ್ದಾರೆ. 65 ವರ್ಷದ ಪಹ್ಲವಿ ಅವರು ಮತ್ತೆ ಇರಾನ್ಗೆ ತೆರಳಿ ಅಲ್ಲಿನ ರಾಜಕೀಯ, ದೇಶದ ಆಡಳಿತದ ಭಾಗವಾಗುವ ಆಶಯವನ್ನು ಹೊಂದಿದ್ದಾರೆ. ಆದರೆ, ಅಲ್ಲಿನ ಆಡಳಿತ ಅದಕ್ಕೆ ಈವರೆಗೆ ಅವಕಾಶ ನೀಡಿಲ್ಲ. ಈಗ ಅಮೆರಿಕದಿಂದಲೇ ತಮ್ಮ ಬೆಂಬಲಿಗರಿಗೆ ಸಂದೇಶ ನೀಡುತ್ತಿರುವ ಅವರು, ಇರಾನ್ನಲ್ಲಿ ಬದಲಾವಣೆ ಬಯಸಿ ಜನರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.

‘ಇರಾನ್ನಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಸಂಪೂರ್ಣವಾಗಿ ಕಿತ್ತೊಗೆದು, ಅದು ಮಂಡಿಯೂರುವಂತೆ ಮಾಡುತ್ತೇವೆ’ ಎಂದು ಅವರು ಇತ್ತೀಚೆಗೆ ‘ಎಕ್ಸ್’ನಲ್ಲಿ ಮಾಡಿರುವ ವಿಡಿಯೊ ಪೋಸ್ಟ್ನಲ್ಲಿ ಹೇಳಿದ್ದಾರೆ. ಈಗಿನ ಸರ್ಕಾರ ಪತನಹೊಂದಿ, ಹೊಸ ಆಡಳಿತ ಬಂದರೆ, ಅದರ ನೇತೃತ್ವ ವಹಿಸಲು ತಾವು ಸಿದ್ಧವಿರುವುದಾಗಿ ಅವರು ಘೋಷಿಸಿದ್ದಾರೆ.

ದಶಕಗಳಿಂದ ತವರಿನಿಂದ ದೂರ ಇರುವ ಪಹ್ಲವಿ ಅವರನ್ನು ಯಾವ ಪ್ರಮಾಣದಲ್ಲಿ ಜನರು ಬೆಂಬಲಿಸಲಿದ್ದಾರೆ ಎಂದು ಹೇಳುವುದು ಕಷ್ಟ. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಕೆಲವರು ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಆದರೆ, ಪ್ರತಿಭಟನಕಾರರಲ್ಲಿ ಮುಂದಿನ ಸರ್ಕಾರ/ಆಡಳಿತದ ಸ್ವರೂಪದ ಬಗ್ಗೆ ಭಿನ್ನ ಭಿನ್ನ ನಿಲುವುಗಳಿವೆ.

2022ರ ಪ್ರತಿಭಟನೆಯ ನೆನಪು

1979ರ ನಂತರ ಇರಾನ್ನಲ್ಲಿ ಆಡಳಿತದ ವಿರುದ್ಧ ಜನರು ಆಗಾಗ ಪ್ರತಿಭಟನೆ ನಡೆಸಿದ ನಿದರ್ಶನಗಳು ಹಲವು (2009, 2017, 2019) ಇವೆ. ಆದರೆ, ಅವು ದೊಡ್ಡ ಪ್ರಮಾಣದಲ್ಲಿರಲಿಲ್ಲ. 2022ರಲ್ಲಿ ಯುವತಿಯೊಬ್ಬಳ ಸಾವನ್ನು ಖಂಡಿಸಿ ದೇಶದಾದ್ಯಂತ ಜನರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈಗಿನ ಹೋರಾಟ ಅದನ್ನೂ ಮೀರಿಸಿದೆ.

2022ರ ಸೆಪ್ಟೆಂಬರ್ನಲ್ಲಿ ಖುರ್ದಿಷ್ ಪ್ರಾಂತ್ಯದ ಮಹ್ಸಾ ಅಮಿನಿ ಎಂಬ ಯುವತಿ ಇರಾನ್ ರಾಜಧಾನಿ ಟೆಹರಾನ್ಗೆ ಸೆಪ್ಟೆಂಬರ್ 13ರಂದು ಬಂದಿದ್ದಳು. ಆಕೆ ಹಿಜಾಬ್ ಧರಿಸಿರಲಿಲ್ಲ. ಆದರೆ, ಇರಾನ್ನಲ್ಲಿರುವ ವಸ್ತ್ರಸಂಹಿತೆಯ ಪ್ರಕಾರ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ. ಇರಾನ್ ಸರ್ಕಾರ ನಿಯೋಜಿಸಿರುವ ಧಾರ್ಮಿಕ ನೈತಿಕ ಪೊಲೀಸರು ಅಮಿನಿಯನ್ನು ಬಂಧಿಸಿದ್ದರು. ಈ ವೇಳೆ ಆಕೆಯ ಮೇಲೆ ಅವರು ತೀವ್ರ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಪೊಲೀಸ್ ವಶದಲ್ಲಿದ್ದ ಆಕೆ ಕುಸಿದು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 16ರಂದು ಆಕೆ ಮೃತಪಟ್ಟಿದ್ದಳು.

ಯುವತಿಯ ಸಾವಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಸಾವಿನಲ್ಲಿ ತನ್ನ ಪಾತ್ರ ಇಲ್ಲ ಎಂದು ಇರಾನ್ ಸರ್ಕಾರ ಹೇಳಿತ್ತು. ಆದರೆ, ಜನರು ಬೀದಿಗಿಳಿದು ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ದೈಹಿಕವಾಗಿ ಹಲ್ಲೆ ನಡೆಸಿದ್ದು, ಯುವತಿಯ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಇರಾನ್ ಸರ್ಕಾರವೇ ಹೊಣೆ ಎಂದು ವಿಶ್ವಸಂಸ್ಥೆ 2024ರಲ್ಲಿ ಹೇಳಿತ್ತು.

ಆಧಾರ: ಎಎಫ್ಪಿ, ರಾಯಿಟರ್ಸ್, ಬಿಬಿಸಿ, ಸಿಎನ್ಎನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.