ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರೈಸಿ ಆಡಳಿತ ಕೊಂಡಾಡಿದ ಮೊಖ್ಬೆರ್‌

ರೈಸಿ ಸಾವಿನ ಬಳಿಕ ಹಂಗಾಮಿ ಅಧ್ಯಕ್ಷರ ಮೊದಲ ಮಾತು
Published 27 ಮೇ 2024, 14:17 IST
Last Updated 27 ಮೇ 2024, 14:17 IST
ಅಕ್ಷರ ಗಾತ್ರ

ಟೆಹ್ರಾನ್‌: ಕಳೆದ ವಾರ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ನ ಅಧ್ಯಕ್ಷರಾದ ಇಬ್ರಾಹಿಂ ರೈಸಿ ಅವರು ಹಾಗೂ ಇತರ ಏಳು ಜನರು ಸಾವನ್ನಪ್ಪಿದ ಘಟನೆ ಬಳಿಕ ಇರಾನ್‌ನ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್‌ ಮೊಖ್ಬೆರ್‌ ಅವರು ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ರೈಸಿ ಅವರನ್ನು ಶ್ಲಾಘಿಸಿದ ಮೊಖ್ಬೆರ್‌ ಅವರು, ‘ರೈಸಿ ಅವರ ಆಡಳಿತಾವಧಿಯಲ್ಲಿ ಇರಾನ್‌ನ ಆರ್ಥಿಕತೆಯು ಸ್ಥಿರತೆಯನ್ನು ಕಾಯ್ದುಕೊಂಡಿದೆ’ ಎಂದರು.

ನೂತನ ಅಧ್ಯಕ್ಷರ ಆಯ್ಕೆಗೆ ಜೂ.28ರಂದು ಚುನಾವಣೆ ನಡೆಯಲಿದೆ. ಮೊಖ್ಬೆರ್‌ ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. 

ಮೇ 20ರಂದು ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ರೈಸಿ, ವಿದೇಶಾಂಗ ಸಚಿವ ಹೊಸೈನ್‌ ಅಮಿರ್‌ಅಬ್ದುಲ್ಲಾಹಿಯಾನ್‌ ಮತ್ತು ಇತರರು ಸಾವಿಗೀಡಾಗಿದ್ದರು. 

ಕಚ್ಚಾತೈಲ ಉತ್ಪಾದನೆಯು ಇರಾನ್‌ನ ಪ್ರಮುಖ ಆರ್ಥಿಕ ಮೂಲವಾಗಿದೆ. ಉತ್ಪಾದನೆಯು ದಿನಕ್ಕೆ 36 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಾಗಿದೆ. ಇಸ್ಲಾಮಿಕ್‌ ಗಣರಾಜ್ಯವಾಗಿರುವ ಇರಾನ್‌ ಅನ್ನು ಗುರಿಯಾಗಿಸಿಕೊಂಡು ವಿದೇಶಗಳ ನಿರ್ಬಂಧವಿದೆ. ಅದರ ಹೊರತಾಗಿಯೂ ದೇಶವು ಇದೀಗ ಪ್ರತಿ ದಿನ 20 ಲಕ್ಷ ಬ್ಯಾರೆಲ್‌ ಕಚ್ಚಾತೈಲವನ್ನು ರಫ್ತು ಮಾಡುತ್ತಿದೆ ಎಂದು ತೈಲ ಸಚಿವ ಜಾವದ್‌ ಓವ್ಜಿ ಭಾನುವಾರ ಹೇಳಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT