ತನಿಖೆಗೆ ಆದೇಶಿಸಿ ಘಟನೆಗೆ ವಿಷಾದಿಸಿದ ಇಸ್ರೇಲ್
ನಾಸೆರ್ ಆಸ್ಪತ್ರೆ ಪ್ರದೇಶದಲ್ಲಿ ದಾಳಿ ನಡೆಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುವಂತೆ ಸೇನಾ ಪಡೆಗಳ ಮುಖ್ಯಸ್ಥರು ಆದೇಶಿಸಿದ್ದಾರೆ. ಹಮಾಸ್ ಸಂಘಟನೆಗೆ ಸೇರದೇ ಇರುವವರಿಗೆ ಗಾಯಗಳಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಪತ್ರಕರ್ತರನ್ನು ಗುರಿಯಾಗಿಸಿರಲಿಲ್ಲ. ನಮ್ಮ ಪಡೆಗಳ ಸುರಕ್ಷತೆಯನ್ನೂ ಗಮನದಲ್ಲಿ ಇಟ್ಟುಕೊಂಡು ಹಮಾಸ್ ಸಂಘಟನೆಗೆ ಸೇರದವರಿಗೆ ಹಾನಿಯಾಗಬಾರದು ಎನ್ನುವುದನ್ನೂ ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ- ಇಸ್ರೇಲ್ ರಕ್ಷಣಾ ಪಡೆ