ಕೈರೊ: ರಫಾ ನಗರದಲ್ಲಿ ಗಾಜಾ ಮಾನವೀಯ ಪ್ರತಿಷ್ಠಾನ ನೆರವು ವಿತರಿಸುತ್ತಿದ್ದ ವೇಳೆ ಉಸ್ರೇಲ್ ದಾಳಿ ನಡೆಸಿದ್ದು ಕನಿಷ್ಠ 26 ಮಂದಿ ಮೃತಪಟ್ಟಿರುವುದಾಗಿ ಪ್ಯಾಲಿಸ್ಟೀನ್–ಹಮಾಸ್ ಮಾಧ್ಯಮ ವರದಿ ತಿಳಿಸಿದೆ.

ದಾಳಿ ನಡೆಸಿದ ಕುರಿತು ಇಸ್ರೇಲ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ನೆರವು ವಿತರಣಾ ಸ್ಥಳಕ್ಕೆ ಏಕಾಏಕಿ ನುಗ್ಗಿದ ಕಾರಣ, ಜನರನ್ನು ನಿಯಂತ್ರಿಸಲು ನಮ್ಮ ಪಡೆ ಎಚ್ಚರಿಕೆ ಗುಂಡು ಹಾರಿಸಿತ್ತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೆರವು ನೀಡುವ ಪ್ರತಿಷ್ಠಾನ ಕೂಡ ಇಸ್ರೇಲ್ಗೆ ಮರಳಿದೆ ಎನ್ನಲಾಗಿದೆ.

ಮೇ 28ರಂದು ನೆರವು ಹಂಚಿಕೆ ವೇಳೆ ಇಸ್ರೇಲ್ ಕನಿಷ್ಠ ಮೂವರು ಪ್ಯಾಲೆಸ್ಟೀನಿಯರನ್ನು ಕೊಂದು 46ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದೆ ಎಂದು ಹಮಾಸ್ ಆರೋಪಿಸಿತ್ತು. ಆದರೆ ಈ ಆರೋಪವನ್ನು ನೆರವು ಪ್ರತಿಷ್ಠಾನ ಅಲ್ಲಗಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.