ಜೆರುಸಲೇಂ: ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಮರಳಿ ಕರೆತರಲು ವಿಫಲವಾಗಿರುವ ಸರ್ಕಾರದ ವಿರುದ್ಧ ಇಸ್ರೇಲ್‌ನಲ್ಲಿ ನಡೆದ ಸಾರ್ವತ್ರಿಕ ಮುಷ್ಕರದ ಪರಿಣಾಮ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಸೋಮವಾರ ಸ್ತಬ್ದವಾಗಿದ್ದವು.

ಆದರೆ ಕೆಲ ಪ್ರದೇಶಗಳಲ್ಲಿ ಮುಷ್ಕರಕ್ಕೆ ಯಾವುದೇ ಬೆಂಬಲ ವ್ಯಕ್ತವಾಗದಿರುವುದು ಅಲ್ಲಿನ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿತ್ತು.

ಇಸ್ರೇಲ್‌ನ ಬಹುದೊಡ್ಡ ವ್ಯಾಪಾರ ಒಕ್ಕೂಟ ‘ಹಿಸ್ತದ್ರತ್’ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿತ್ತು. ಬ್ಯಾಂಕ್, ಆರೋಗ್ಯ ಸೇವೆ ಮತ್ತು ದೇಶದ ಪ್ರಮುಖ ವಿಮಾನ ನಿಲ್ದಾಣ ಸೇರಿದಂತೆ ಮುಖ್ಯ ಆರ್ಥಿಕ ವಲಯಗಳಲ್ಲಿ ವ್ಯತ್ಯಯ ಉಂಟುಮಾಡುವ ಗುರಿಯನ್ನು ಹೊಂದಿತ್ತು.

ಗಾಜಾದಲ್ಲಿ ಆರು ಜನ ಒತ್ತೆಯಾಳುಗಳು ಮೃತಪಟ್ಟ ಬೆನ್ನಲ್ಲೆ ಇಸ್ರೇಲ್‌ನ ಸಾವಿರಾರು ಜನ ಭಾನುವಾರ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಕಿಡಿಕಾರಿದ ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು, ‘ಸುಮಾರು 11 ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಹಮಾಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅವರನ್ನು ಬದುಕಿಸಬಹುದಿತ್ತು’ ಎಂದರು.

ಸೇನೆಯ ಮೂಲಕ ಹಮಾಸ್ ಮೇಲೆ ಒತ್ತಡ ಹೇರುವ ನೆತನ್ಯಾಹು ಅವರ ಕಾರ್ಯತಂತ್ರವನ್ನು ಹಲವರು ಬೆಂಬಲಿಸಿದ್ದಾರೆ. ‘ಇದರಿಂದಾಗಿ ಹಮಾಸ್ ಬಂಡುಕೋರರು ಇಸ್ರೇಲ್ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಾರೆ. ನಮ್ಮವರ ರಕ್ಷಣೆಯಾಗುವುದರ ಜೊತೆಗೆ ಬಂಡುಕೋರರ ಶಮನವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹುಥಿ ಬಂಡುಕೋರರಿಂದ ಶಂಕಿತ ದಾಳಿ

ದುಬೈ: ‘ಕೆಂಪು ಸಮುದ್ರದಲ್ಲಿ ಸೋಮವಾರ ಹಡಗೊಂದರ ಮೇಲೆ ದಾಳಿ ನಡೆದಿದ್ದು ಯೆಮೆನ್‌ನ ಹುಥಿ ಬಂಡುಕೋರರು ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ ‘ಎರಡು ವೈಮಾನಿಕ ಸಾಧನಗಳು ಹಡಗಿನ ಮೇಲೆ ದಾಳಿ ನಡೆಸಿದ್ದು ಹಡಗಿನ ಬಳಿ ಇನ್ನೊಂದು ಸ್ಫೋಟಕ ಪತ್ತೆಯಾಗಿದೆ. ಹಡಗಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಪ್ರಯಾಣ ಮುಂದುವರಿದಿದೆ’ ಎಂದು ಬ್ರಿಟನ್ ಸಾಗರ ವ್ಯಾಪಾರ ಕೇಂದ್ರ ತಿಳಿಸಿದೆ. ಹುಥಿ ಬಂಡುಕೋರರು ದಾಳಿಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಇತ್ತೀಚೆಗೆ ಬಂಡುಕೋರರು ಇಸ್ರೇಲ್ ಅಮೆರಿಕ ಮತ್ತು ಬ್ರಿಟನ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ.

ಗಾಜಾ: ಬೃಹತ್ ಮಟ್ಟದ ಪೋಲಿಯೊ ಲಸಿಕೆ ಅಭಿಯಾನ

ದೀರ್ ಅಲ್–ಬಲಾಹ್: ಪ್ಯಾಲೆಸ್ಟೀನ್ ಆರೋಗ್ಯ ಇಲಾಖೆ ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳು ಗಾಜಾಪಟ್ಟಿಯಲ್ಲಿ ಬೃಹತ್ ಮಟ್ಟದ ಪೋಲಿಯೊ ಲಸಿಕಾ ಅಭಿಯಾನ ಆರಂಭಿಸಿವೆ. ಬುಧವಾರದವರೆಗೆ ಕೇಂದ್ರ ಗಾಜಾದಲ್ಲಿ ಪೊಲೀಯೊ ಲಸಿಕೆ ಅಭಿಯಾನ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದು 6.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದುವರೆಗೆ 72 ಸಾವಿರಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.