ಜೆರುಸಲೇಂ: ಇಸ್ರೇಲ್ ಸರ್ಕಾರದ ನ್ಯಾಯಾಂಗ ಸುಧಾರಣೆ ಕಾಯ್ದೆಯ ಪ್ರಮುಖ ಅಂಶವೊಂದರ ಅಳವಡಿಕೆಗೆ ಸಂಸದೀಯ ಸಮಿತಿ ಗುರುವಾರ ಒಪ್ಪಿಗೆ ಸೂಚಿಸಿದೆ.
ಸರ್ಕಾರದ ನಿರ್ಧಾರಗಳನ್ನು ರದ್ದುಗೊಳಿಸಬಲ್ಲ ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಹಲವು ಸುತ್ತಿನ ಚರ್ಚೆಗಳ ಬಳಿಕ ಸಂಸದೀಯ ಸಮಿತಿ ಗುರುವಾರ ಒಪ್ಪಿಕೊಂಡಿತು.
ಸಂಸದೀಯ ಸಮಿತಿಯ 9 ಮಂದಿ ಪ್ರಸ್ತಾವನೆಯನ್ನು ಒಪ್ಪಿ ಮತ ಹಾಕಿದರೆ, 7 ಮಂದಿ ವಿರೋಧಿಸಿದರು. ಕಾಯ್ದೆ ಇನ್ನು ಸಂಸತ್ತಿನಲ್ಲಿ ಮಂಡನೆಗೊಳ್ಳಲಿದೆ. ವಿವಾದಾತ್ಮಕ ಕಾಯ್ದೆ ಅಂಗೀಕಾರಕ್ಕೆ ಅಂತಿಮ ಹಂತದ ಮತದಾನವಷ್ಟೇ ಬಾಕಿ ಉಳಿದಿದ್ದು, ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.