ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel - Palestine Conflict: ಹಮಾಸ್‌ನ 500ಕ್ಕೂ ನೆಲೆಗಳ ಮೇಲೆ ಇಸ್ರೇಲ್ ದಾಳಿ

Published 9 ಅಕ್ಟೋಬರ್ 2023, 6:35 IST
Last Updated 9 ಅಕ್ಟೋಬರ್ 2023, 6:35 IST
ಅಕ್ಷರ ಗಾತ್ರ

ಜೆರುಸಲೇಮ್‌: ಗಾಜಾ ಪಟ್ಟಿಯಲ್ಲಿ ಹಮಾಸ್‌ ಹಾಗೂ ಇಸ್ಲಾಮಿಕ್‌ ಜಿಹಾದ್‌ ಉಗ್ರರಿಗೆ ಸೇರಿದ 500ಕ್ಕೂ ಹೆಚ್ಚು ನೆಲೆಗಳ ಮೇಲೆ ವಾಯುದಾಳಿ ಹಾಗೂ ಫಿರಂಗಿ ಶೆಲ್ ದಾಳಿ ಮಾಡಿದ್ದಾಗಿ ಇಸ್ರೇಲ್‌ ಸೋಮವಾರ ಹೇಳಿದೆ.

‘ಓವರ್‌ನೈಟ್‌ ಐಡಿಎಫ್‌ನ (ಇಸ್ರೇಲ್ ಸೈನ್ಯ) ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳು, ಫಿರಂಗಿ ಶೆಲ್‌ಗಳ ಮೂಲಕ ಗಾಜಾ ಪಟ್ಟಿಯಲ್ಲಿರುವ 500ಕ್ಕೂ ಹೆಚ್ಚು ಹಮಾಸ್‌ ಹಾಗೂ ಇಸ್ಲಾಮಿಕ್‌ ಜಿಹಾದಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನೆ ಪ್ರಕಟಣೆಯಲ್ಲಿ ಹೇಳಿದೆ.

ಸೋಮವಾರ ಬೆಳಿಗ್ಗೆಯೂ ಪ್ಯಾಲೆಸ್ಟೀನ್‌ ಮೇಲೆ ದಾಳಿ ನಡೆದಿದ್ದು, ದಾಳಿ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.

ಹಮಾಸ್‌ ರಾಜಕೀಯ ವಿಭಾಗದ ಮುಖ್ಯಸ್ಥ ರವಾಹಿ ಮುಸ್ತಹ ಅವರ ಕಟ್ಟಡ ಸೇರಿ ಪ್ಯಾಲೇಸ್ಟೀನ್‌ನ ಹಲವು ಬಹುಮಹಡಿ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ.

ಇಸ್ರೇಲ್‌ಗೆ ಒಳನುಸುಳಲು ಸಹಾಯ ಮಾಡಿದ ಉಗ್ರ ಕಮಾಂಡ್ ಕೇಂದ್ರದ ಮೇಲೂ ದಾಳಿ ನಡೆಸಿದ್ದಾಗಿ ಇಸ್ರೇಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮಸೀದಿಯಲ್ಲಿ ಇದ್ದ ಒಂದು ಸೇರಿ ಹಮಾಸ್‌ಗೆ ಸೇರಿದ ಎರಡು ಕಾರ್ಯಾಚರಣಾ ಸ್ವತ್ತುಗಳ ಮೇಲೆ ದಾಳಿ ನಡೆಸಲಾಗಿದೆ. ಇಸ್ಲಾಮಿಕ್ ಜಿಹಾದ್‌ಗೆ ಸೇರಿದ ನೆಲೆಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಗಜಾ ಪಟ್ಟಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಹಮಾಸ್‌ ಬಂಡುಕೋರರು ಶನಿವಾರ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ 700 ಇಸ್ರೇಲಿಗಳು ಸಾವಿಗೀಡಾಗಿದ್ದರು. ಗಾಜಾದಲ್ಲಿ ಕನಿಷ್ಠ 413 ಮಂದಿ ಪ್ಯಾಲೇಸ್ಟೀನರು ಸಾವಿಗೀಡಾಗಿದ್ದರು.

ಹಮಾಸ್‌ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಸರಣಿ ದಾಳಿಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT