ಜೆರುಸಲೇಂ: ‘ಇರಾನ್ ತನ್ನ ಅಣ್ವಸ್ತ್ರ ತಯಾರಿಸುವ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿತ್ತು ಹಾಗೂ ಕೆಲವೇ ತಿಂಗಳಲ್ಲಿ ಆ ಕಾರ್ಯವನ್ನು ಅದು ಪೂರ್ಣಗೊಳಿಸುತ್ತಿತ್ತು. ಆ ಬಳಿಕ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿತ್ತು. ಈ ಕಾರಣಕ್ಕೇ ಇರಾನ್ ಮೇಲೆ ನಾವು ದಾಳಿ ನಡೆಸಿದೆವು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.

ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಅವರು,‘ತನ್ನ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಅಣ್ವಸ್ತ್ರಗಳನ್ನು ರಕ್ಷಿಸುವುದಕ್ಕಾಗಿ ಇರಾನ್ ಭೂಮಿಯ ಆಳದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿತ್ತು. ಹೀಗಾಗಿ ಅದರ ಮೇಲೆ ತುರ್ತಾಗಿ ದಾಳಿ ನಡೆಸುವುದು ಅಗತ್ಯವಾಗಿತ್ತು’ ಎಂದು ವಿವರಿಸಿದ್ದಾರೆ.

‘ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧ ಕೊನೆಗೊಳ್ಳುವುದಿಲ್ಲ’ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ನೆತನ್ಯಾಹು,‘ಈ ಮಿಲಿಟರಿ ಕಾರ್ಯಾಚರಣೆ ಶೀಘ್ರವೇ ಅಂತ್ಯಗೊಳ್ಳಲಿದೆ’ ಎಂದಿದ್ದಾರೆ.

ಪಶ್ಚಿಮ ಏಷ್ಯಾದ ಶೇಕಡ 95ರಷ್ಟು ಸಮಸ್ಯೆಗಳಿಗೆ ಇರಾನ್ ಕಾರಣ. ಅಲ್ಲಿನ ಆಡಳಿತ ಬದಲಾದಲ್ಲಿ ಅರಬ್ ಹಾಗೂ ನೆರೆಯ ಮುಸ್ಲಿಂ ರಾಷ್ಟ್ರಗಳೊಂದಿಗೆ ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಲಿದೆ
-ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.