ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War: ಇಸ್ರೇಲ್‌ನಿಂದ ರಫಾ ಆಕ್ರಮಣದ ಬೆದರಿಕೆ

Published 19 ಫೆಬ್ರುವರಿ 2024, 15:24 IST
Last Updated 19 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ಗಾಜಾ ಪಟ್ಟಿ: ‘ಹಮಾಸ್‌ ಬಂಡುಕೋರರು ತಮ್ಮ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ರಂಜಾನ್‌ ತಿಂಗಳ ಆರಂಭದ ಸಂದರ್ಭದಲ್ಲಿ ಗಾಜಾ ಪಟ್ಟಿಯ ರಫಾ ನಗರವ‌ನ್ನು ಆಕ್ರಮಿಸಲಾಗುವುದು’ ಎಂದು ಇಸ್ರೇಲ್‌ ಬೆದರಿಕೆ ಹಾಕಿದೆ.

ರಫಾ ನಗರದಲ್ಲಿ ಆಶ್ರಯ ಪಡೆದಿರುವ ಪ್ಯಾಲೆಸ್ಟೀನ್‌ ನಾಗರಿಕರ ರಕ್ಷಣೆ ಕುರಿತು ಇಸ್ರೇಲ್‌ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಇದ್ದರೂ ಈ ಎಚ್ಚರಿಕೆ ನೀಡಿದೆ.

ಈ ಮಧ್ಯೆ, ಕದನ ವಿರಾಮದ ಮಾತುಕತೆಗಳು ನಿರೀಕ್ಷಿತ ಫಲ ನೀಡಿಲ್ಲ. ಇಸ್ರೇಲ್‌ನ ಬೆದರಿಕೆ ಬೆನ್ನಲ್ಲೇ ವಿಶ್ವಸಂಸ್ಥೆ, ಅಮೆರಿಕ ಹಾಗೂ ಅನೇಕ ದೇಶಗಳು, ‘ರಫಾ ಮೇಲೆ ಆಕ್ರಮಣ ಮಾಡುವ ನಿರ್ಧಾರವನ್ನು ಕೈಬಿಡಬೇಕು’ ಎಂದು ಇಸ್ರೇಲ್‌ಗೆ ಮನವಿ ಮಾಡಿವೆ.

‘ಜಗತ್ತು ಮತ್ತು ಹಮಾಸ್‌ ನಾಯಕರಿಗೆ ಈ ಸಂಗತಿ ತಿಳಿಯಬೇಕಿದೆ. ಹಮಾಸ್ ಬಂಡುಕೋರರು ಒತ್ತೆಯಿರಿಸಿಕೊಂಡಿರುವ ನಮ್ಮವರನ್ನು ರಂಜಾನ್‌ ವೇಳೆಗೆ ಬಿಡುಗಡೆ ಮಾಡದಿದ್ದರೆ, ರಫಾ ಸೇರಿದಂತೆ ಎಲ್ಲ ಕಡೆಯೂ ಆಕ್ರಮಣ ನಡೆಸಬೇಕಾಗುತ್ತದೆ’ ಎಂದು ಸೇನೆಯ ನಿವೃತ್ತ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ ಅವರು ಭಾನುವಾರ ಜೆರುಸಲೇಂನಲ್ಲಿ ನಡೆದ ಅಮೆರಿಕನ್‌ ಯಹೂದಿ ನಾಯಕರ ಸಮ್ಮೇಳನದಲ್ಲಿ ಹೇಳಿದರು.

‘ಹಮಾಸ್‌ ಮುಂದೆ ಇನ್ನೂ ಒಂದು ಆಯ್ಕೆಯಿದೆ. ನಮಗೆ ಶರಣಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಗಾಜಾದ ಜನರು ರಂಜಾನ್‌ ಮಾಸವನ್ನು ಆಚರಣೆ ಮಾಡಬಹುದು’ ಎಂದಿದ್ದಾರೆ. ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಮಾರ್ಚ್‌ 10ರಂದು ಶುರುವಾಗಲಿದೆ.

29 ಸಾವಿರ ದಾಟಿದ ಸಾವಿನ ಸಂಖ್ಯೆ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ಬಳಿಕ ಮೃತಪಟ್ಟ ಪ್ಯಾಲೆಸ್ಟೀನ್ ಪ್ರಜೆಗಳ ಸಂಖ್ಯೆ 29,092ಕ್ಕೆ ತಲುಪಿದೆ ಎಂದು ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT