ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಇಸ್ರೇಲ್‌ ವೈಮಾನಿಕ ದಾಳಿ: ಮಕ್ಕಳು ಸೇರಿ 9 ಮಂದಿ ಸಾವು

Published 20 ಏಪ್ರಿಲ್ 2024, 14:37 IST
Last Updated 20 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ರಫಾ (ಗಾಜಾ ಪಟ್ಟಿ): ಗಾಜಾದಲ್ಲಿ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

‘ರಫಾ ಸಮೀಪದಲ್ಲಿರುವ ಟೆಲ್ ಸುಲ್ತಾನ್‌ನಲ್ಲಿನ ವಸತಿ ಸಮುಚ್ಛಯದ ಮೇಲೆ ಶುಕ್ರವಾರ ದಾಳಿ ನಡೆದಿದೆ’ ಎಂದು ಗಾಜಾದ ರಕ್ಷಣಾ ಪಡೆ ಶನಿವಾರ ತಿಳಿಸಿದೆ.

ರಫಾದ ಆಸ್ಪತ್ರೆಯೊಂದರ ದಾಖಲೆಗಳ ಪ್ರಕಾರ, 6 ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ

‘ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ದಾಳಿಯಿಂದಾಗಿ 37 ಮಂದಿ ಮೃತಪಟ್ಟಿದ್ದು, 68 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಇಸ್ರೇಲ್‌–ಹಮಾಸ್‌ ಯುದ್ಧದಲ್ಲಿ ಈವರೆಗೆ ಪ್ಯಾಲೆಸ್ಟಿನ್‌ನ 34,049 ಮಂದಿ ಮೃತಪಟ್ಟಿದ್ದು, 76,901 ಮಂದಿ ಗಾಯಗೊಂಡಿದ್ದಾರೆ ‌’ ಎಂದು ಗಾಜಾದ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT