ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌: ನ್ಯಾಯಾಂಗ ವ್ಯವಸ್ಥೆ ಬದಲು– ನೇತನ್ಯಾಹು ಕ್ರಮಕ್ಕೆ ವಿರೋಧ– ಪುನಃ ಪ್ರತಿಭಟನೆ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ
Published 18 ಜುಲೈ 2023, 14:15 IST
Last Updated 18 ಜುಲೈ 2023, 14:15 IST
ಅಕ್ಷರ ಗಾತ್ರ

ಟೆಲ್‌ ಅವಿವ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಕಾರರು ಮಂಗಳವಾರ ಹೆದ್ದಾರಿ ತಡೆದು, ಟೆಲ್‌ ಅವೀವ್‌ನ ಷೇರು ಮಾರುಕಟ್ಟೆ ಹಾಗೂ ಮಿಲಿಟರಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿ ಪುನಃ ಪ್ರತಿಭಟನೆ ನಡೆಸಿದರು.

ನೇತನ್ಯಾಹು ಅವರ ದೀರ್ಘಕಾಲದ ಮಿತ್ರಪಕ್ಷಗಳು ಸಂಸದೀಯ ಸಮಿತಿಯಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ವಿವಾದಾತ್ಮಕ ಮಸೂದೆ ಮಂಡಿಸಿದೆ. ಇದಕ್ಕೆ ಮುಂದಿನ ವಾರ ಮತದಾನದ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಅಲ್ಲದೇ ಇಡೀ ದಿನ ವಿವಿಧ ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಯೂ ಇದೆ.

ಪ್ರತಿಭಟನಕಾರರಲ್ಲಿ ಅನೇಕರು ಮೀಸಲು ಸೈನಿಕರೂ ಸೇರಿದ್ದಾರೆ. ಇವರಲ್ಲಿ ಕೆಲವರು ಮಾನವ ಸರಪಳಿ ನಿರ್ಮಿಸಿ ಮಿಲಿಟರಿ ಕೇಂದ್ರ ಕಚೇರಿಯ ಪ್ರವೇಶ ದ್ವಾರ ‘ಕಿರ್‍ಯಾ’ವನ್ನು ಪ್ರತಿಬಂಧಿಸಿದರು.

ಷೇರು ಮಾರುಕಟ್ಟೆ ಬಳಿ ಸೇರಿದ್ದ ಕೆಲವು ಪ್ರತಿಭಟನಕಾರರು, ಹೊಗೆ ಬಾಂಬ್‌ ಸ್ಫೋಟಿಸಿ, ಡ್ರಮ್‌ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ದೇಶದ ಅಡಿಪಾಯವನ್ನು ರಕ್ಷಿಸಿ’, ‘ಸರ್ವಾಧಿಕಾರವು ಆರ್ಥಿಕತೆಯನ್ನು ಕೊಲ್ಲುತ್ತದೆ’ ಎಂಬ ಘೋಷಣೆಗಳನ್ನು ಕೂಗಿದರು.

ಇಸ್ರೇಲ್‌ನ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿರುವ ಹಿಸ್ತಾದ್ರತ್‌ನ ಕೇಂದ್ರ ಕಚೇರಿ ಬಳಿ ನೆರೆದಿದ್ದ ಇನ್ನೂ ಹಲವರು, ‘ಸಂಘಟನೆಯು ಸಾಮೂಹಿಕ ಮುಷ್ಕರಕ್ಕೆ ಕರೆ ನೀಡಬೇಕು’ ಎಂದು ಆಗ್ರಹಿಸಿದರು.

ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಕಾರರು ಭ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಕಾರರು ಭ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಷೇರು ಮಾರುಕಟ್ಟೆ ಬಳಿ ಸೇರಿದ್ದ ಪ್ರತಿಭಟನಕಾರರು ಹೊಗೆ ಬಾಂಬ್‌ ಸ್ಫೋಟಿಸಿ ಆಕ್ರೋಶ ವ್ಯಕ್ತಪಡಿಸಿದರು –ಎಎಫ್‌ಪಿ ಚಿತ್ರ

ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸುವ ಮೂಲಕ ಮಿಲಿಟರಿ ಕೇಂದ್ರ ಕಚೇರಿಯ ಪ್ರವಶ ದ್ವಾರ ‘ಕಿರ್‍ಯಾ’ವನ್ನು ಪ್ರತಿಬಂಧಿಸಿದ ಪರಿ –ಎಎಫ್‌ಪಿ ಚಿತ್ರ
ನೇತನ್ಯಾಹು ಅವರ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸುವ ಮೂಲಕ ಮಿಲಿಟರಿ ಕೇಂದ್ರ ಕಚೇರಿಯ ಪ್ರವಶ ದ್ವಾರ ‘ಕಿರ್‍ಯಾ’ವನ್ನು ಪ್ರತಿಬಂಧಿಸಿದ ಪರಿ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT