ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 9 ಸಾವು

Published 9 ಫೆಬ್ರುವರಿ 2024, 13:17 IST
Last Updated 9 ಫೆಬ್ರುವರಿ 2024, 13:17 IST
ಅಕ್ಷರ ಗಾತ್ರ

ಜೆರುಸೆಲೆಂ: ಗಾಜಾಪಟ್ಟಿಯ ಮಧ್ಯಭಾಗ ಮತ್ತು ಉತ್ತರದ ರಫಾ ನಗರದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 9 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

‘ಇಸ್ರೇಲ್‌ ಮಿತಿ ಮೀರಿ ಯುದ್ಧ ನಡೆಸುತ್ತಿದೆ’ ಎಂದು ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ ಬೆನ್ನಲ್ಲೆ, ಈಜಿಪ್ಟ್‌ ಗಡಿಭಾಗದಲ್ಲಿ ತಡರಾತ್ರಿ ಆರಂಭವಾದ ದಾಳಿ ಶುಕ್ರವಾರದವರೆಗೆ ನಡೆಯಿತು.

ಇಸ್ರೇಲ್‌ ದಾಳಿಯಿಂದ ರಕ್ಷಣೆ ಪಡೆಯಲು 23 ಲಕ್ಷ ಜನರು ಈಜಿಪ್ಟ್‌ ಗಡಿ ಭಾಗದ ಕಡೆ ಸಾಗುತ್ತಿದ್ದು, ಕೆಲವರು ಪ್ಯಾಲೆಸ್ಟೀನ್ ಬಿಡಲಾಗದೇ ತಾತ್ಕಾಲಿಕ ಟೆಂಟ್‌ಗಳಲ್ಲಿ ಮತ್ತು ವಿಶ್ವಸಂಸ್ಥೆ ನಿರ್ಮಿಸಿರುವ ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT