ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಜಪಾನ್‌ ಬಾಂಧವ್ಯಕ್ಕೆ ಬಲ ನೀಡಿದ ಜೈಶಂಕರ್ ಭೇಟಿ: ವಿದೇಶಾಂಗ ಸಚಿವಾಲಯ

Published 9 ಮಾರ್ಚ್ 2024, 13:45 IST
Last Updated 9 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ಟೋಕಿಯೊ: ‘ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರ ಜಪಾನ್ ಭೇಟಿಯು ಉಭಯ ದೇಶಗಳ ಮಧ್ಯೆ ಬಾಂಧವ್ಯ ವೃದ್ಧಿಗೆ ಸಕಾಲದಲ್ಲಿ ಸೂಕ್ತ ಅವಕಾಶಗಳನ್ನು ಒದಗಿಸಿದೆ’ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯವು, ಉಭಯ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರ ಸಹಭಾಗಿತ್ವವನ್ನು ಬಲಪಡಿಸಲು ಹಲವು ಮಾರ್ಗಗಳನ್ನು ಮುಕ್ತವಾಗಿರಿಸಿದೆ ಎಂದು ಪ್ರತಿಪಾದಿಸಿದೆ.

ಈಚೆಗೆ ಜಪಾನ್‌ಗೆ ಮೂರು ದಿನ ಪ್ರವಾಸ ಕೈಗೊಂಡಿದ್ದ ಜೈಶಂಕರ್ ಅವರು, ಅಲ್ಲಿನ ಪ್ರಧಾನಮಂತ್ರಿ ಫುಮಿಯೊ ಕಿಷಿಡಾ ಅವರನ್ನು ಭೇಟಿಯಾಗಿದ್ದರು. ಜೊತೆಗೆ ಹಲವು ಪ್ರಮುಖ ಸಭೆಗಳಲ್ಲಿಯೂ ಭಾಗವಹಿಸಿದ್ದರು.

ಉಭಯ ದೇಶಗಳ ಬಾಂಧವ್ಯ ಕುರಿತು ಹಾಗೂ ಜಾಗತಿಕವಾಗಿ ಹೊಂದಿರುವ ಸಹಕಾರ ಕುರಿತು ಕಿಷಿಡಾ ಅವರಿಗೆ ವಿವರಣೆಯನ್ನು ನೀಡಿದ್ದ ಜೈಶಂಕರ್‌, ಇದನ್ನು ಇನ್ನಷ್ಟು ಬಲಪಡಿಸಲು ಸಹಕಾರ ಕೋರಿದ್ದರು.

ಜಪಾನ್‌ನ ವಿದೇಶಾಂಗ ಸಚಿವ ಯೊಕೊ ಕಮಿಕವಾ ಜೊತೆಗೆ 16ನೇ ಭಾರತ–ಜಪಾನ್‌ ಕಾರ್ಯತಂತ್ರ ಮಾತುಕತೆ ನಡೆಸಿದ್ದ ಅವರು, ವ್ಯಾಪಾರ, ಹೂಡಿಕೆ, ಮೂಲಸೌಕರ್ಯ, ತಂತ್ರಜ್ಞಾನ ಸಹಕಾರ, ಆಭಿವೃದ್ಧಿ ಸಹಯೋಗ, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಕುರಿತು ಚರ್ಚಿಸಿದ್ದರು.

ಜೈಶಂಕರ್ ಅವರ ಭೇಟಿಯು ಉಭಯ ದೇಶಗಳ ನಡುವಿನ ಹಾಲಿ ಸಂಬಂಧದ ಜೊತೆಗೆ, ಇನ್ನಷ್ಟು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT