ವಾಷಿಂಗ್ಟನ್: ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಪ್ಸ್ಟೈನ್ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳಲ್ಲಿ 35 ಮಿಲಿಯನ್ ಡಾಲರ್ (ಅಂದಾಜು ₹318 ಕೋಟಿ) ಪರಿಹಾರ ಪಾವತಿಸಲು ಸಿದ್ಧವಿರುವುದಾಗಿ ಎಪ್ಸ್ಟೈನ್ ಎಸ್ಟೇಟ್, ಕೋರ್ಟ್ಗೆ ತಿಳಿಸಿದೆ.

ಎಪ್ಸ್ಟೈನ್ ಎಸ್ಟೇಟ್ ಪಾವತಿಗೆ ಒಪ್ಪಿಕೊಂಡಿರುವ ಮೊತ್ತ ಪಾವತಿಸುವ ಪ್ರಸ್ತಾವವು ನ್ಯೂಯಾರ್ಕ್ನ ಫೆಡರಲ್ ನ್ಯಾಯಾಧೀಶರು ಅನುಮೋದಿಸಿದರೆ ಮಾತ್ರ ಅಂತಿಮಗೊಳ್ಳಲಿದೆ.

‘1995ರ ಜನವರಿ 1ರಿಂದ 2019ರ ಆಗಸ್ಟ್ 10ರ ಅವಧಿಯಲ್ಲಿ ಎಪ್ಸ್ಟೈನ್ನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿ ನರಳಿದ್ದೇವೆ’ ಎಂದು 40ಕ್ಕೂ ಹೆಚ್ಚು ಸಂತ್ರಸ್ತರು ಕೋರ್ಟ್ಗೆ ತಿಳಿಸಿದ್ದಾರೆ.

ನಲವತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂತ್ರಸ್ತರು ಇದ್ದರೆ 35 ಮಿಲಿಯನ್ ಡಾಲರ್ ಹಾಗೂ 40ಕ್ಕಿಂತ ಕಡಿಮೆ ಇದ್ದರೆ 25 ಮಿಲಿಯನ್ ಡಾಲರ್ ಪರಿಹಾರ ಪಾವತಿಸುವುದಾಗಿ ಎಪ್ಸ್ಟೈನ್ನ ಸಲಹೆಗಾರರೂ ಆಗಿರುವ ಮಾಜಿ ವಕೀಲ ಡರೈನ್ ಇಂಡೇಕ್ ಹಾಗೂ ಮಾಜಿ ಲೆಕ್ಕಾಧಿಕಾರಿ ರಿಚರ್ಡ್ ಕಾನ್ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.

ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ಕಾನೂನು ಸಂಸ್ಥೆಯ ಪ್ರತಿನಿಧಿ ಬೊಯಿಸ್ ಶಿಲ್ಲರ್ ಫ್ಲೆಕ್ನರ್, ‘ಎಷ್ಟು ಮಂದಿ ಸಂತ್ರಸ್ತರು ಈ ಮೊಕದ್ದಮೆಯ ಭಾಗವಾಗಿದ್ದಾರೆ ಎನ್ನುವುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಎಪ್ಸ್ಟೈನ್ ಎಸ್ಟೇಟ್ 40ಕ್ಕೂ ಹೆಚ್ಚು ಸಂತ್ರಸ್ತರ ಪರಿಹಾರ ಇತ್ಯರ್ಥ ಪಡಿಸಲು ಬಾಕಿ ಉಳಿಸಿಕೊಂಡಿದೆ ಎಂದು ‘ಬ್ಲೂಮ್ಬರ್ಗ್ ನ್ಯೂಸ್’ ವರದಿ ಮಾಡಿದೆ.

ಎಪ್ಸ್ಟೈನ್ ಸಲಹೆಗಾರರನ್ನು ಪ್ರತಿನಿಧಿಸಿರುವ ವಕೀಲ ಡೇನಿಯಲ್ ಎಚ್. ವೀನರ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಎಪ್ಸ್ಟೈನ್ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ 30 ಲಕ್ಷ ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು.

‘ನಾವು ತಪ್ಪೆಸಗಿಲ್ಲ’

‘ಎಪ್ಸ್ಟೈನ್ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ನಾವು ಸಾಕ್ಷಿಗಳಲ್ಲ ಹಾಗೂ ಈ ಪ್ರಕರಣದ ಸಂತ್ರಸ್ತರ ಜತೆಗೆ ಯಾವುದೇ ತಪ್ಪೆಸಗಿಲ್ಲ’ ಎಂದು ಎಪ್ಸ್ಟೈನ್ ಎಸ್ಟೇಟ್ನ ಕಾರ್ಯನಿರ್ವಾಹಕರೂ ಆಗಿರುವ ಡರೈನ್ ಇಂಡೇಕ್ ಮತ್ತು ರಿಚರ್ಡ್ ಕಾನ್ ಹೇಳಿದ್ದಾರೆ.

ಆದರೆ ಎಪ್ಸ್ಟೈನ್ ವಿರುದ್ಧ 2024ರಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ‘ಸಲಹೆಗಾರರು ತಮ್ಮ ಕಾನೂನು ಮತ್ತು ವ್ಯವಹಾರಗಳ ಮೂಲಕ ಎಪ್ಸ್ಟೈನ್ನ ಅಕ್ರಮ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಎಪ್ಸ್ಟೈನ್ನ ಸಲಹೆಗಾರರು ತಮ್ಮ ಮೇಲಿನ ತಪ್ಪುಗಳನ್ನು ಒಪ್ಪಿಕೊಂಡರೆ ಮುಂದಿನ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ ಎಂದು ಅಮೆರಿಕದ ಮ್ಯಾನ್ಹಟನ್ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.