ವಾಷಿಂಗ್ಟನ್:ಕೋವಿಡ್-19 ನಿಯಂತ್ರಣಕ್ಕಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ನರಆರೋಗ್ಯಕ್ಕೆಸಂಬಂಧಿಸಿದ ಅಪರೂಪದ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದ್ದು,ಕೆಲವೊಮ್ಮೆ ಪಾರ್ಶ್ವವಾಯುವಿಗೆ ಕಾರಣವಾಗುವ ಗುಲೇನ್-ಬೇರ್ ಸಿಂಡ್ರೋಮ್ (ಜಿಬಿಎಸ್)ಅನ್ನು ವರದಿಗಳಲ್ಲಿ ಗಮನಿಸಲಾಗಿದೆ. ಇನ್ನೂ ಖಚಿತ ನಿರ್ಧಾರಕ್ಕೆ ಬಂದಿಲ್ಲ ಎಂದುಎಫ್‌ಡಿಎ ಹೇಳಿದೆ.

ʼಜಾನ್ಸನ್ ಅಂಡ್ ಜಾನ್ಸನ್ ಕಂಪೆನಿಯ ಲಸಿಕೆ ಪಡೆದುಕೊಂಡವರ ಆರೋಗ್ಯ ಸ್ಥಿತಿ ಕುರಿತ ವಾಸ್ತವ ಅಂಕಿ-ಅಂಶಗಳ ಪರಿಶೀಲನೆ ನಡೆಸಲಾಗಿದ್ದು, ಲಸಿಕೆ ಪಡೆದವರಲ್ಲಿಗುಲೇನ್-ಬೇರ್ ಸಿಂಡ್ರೋಮ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆʼ ಎಂದು ಎಫ್‌ಡಿಎ ಮಾಹಿತಿ ನೀಡಿದೆ.

ತುರ್ತು ಬಳಕೆಗೆ ಅನುಮತಿ ಇರುವ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದ 42 ದಿನಗಳಲ್ಲಿ ಕೆಲವರಲ್ಲಿ ಜಿಬಿಎಸ್‌ಕಾಣಿಸಿಕೊಂಡಿದೆ. ಆದರೆ, ಇದರಿಂದ ಮೃತಪಟ್ಟ ಪ್ರಕರಣಗಳು ವರದಿಯಾಗಿಲ್ಲ. ಮಾಡೆರ್ನಾ ಮತ್ತು ಫೈಜರ್-ಬಯೋಟೆಕ್ ಲಸಿಕೆಹಾಕಿಸಿಕೊಂಡವರಲ್ಲಿ ಇಂತಹ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ.

ಇದುವರೆಗೆ 1.28 ಕೋಟಿ ಲಸಿಕೆ ವಿತರಿಸಲಾಗಿದ್ದು, ಜಿಬಿಎಸ್ ಕಾಣಿಸಿಕೊಂಡ 100ಕ್ಕೂ ಹೆಚ್ಚು ಪ್ರಕರಣಗಳ ಪ್ರಾಥಮಿಕ ವರದಿಗಳನ್ನು ಯುಎಸ್ ಲಸಿಕೆ ಪ್ರತಿಕೂಲ ವರದಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ.

ಜಿಬಿಎಸ್ ನರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರಿಂದಾಗಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನರಕೋಶಗಳಿಗೆ ಹಾನಿ ಮಾಡುತ್ತದೆ ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.ಕೆಲವೊಮ್ಮೆಪಾರ್ಶ್ವವಾಯು ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.