ಕಾಬೂಲ್, ಅಫ್ಗಾನಿಸ್ತಾನ: ನಗರದ ಮಧ್ಯಭಾಗದಲ್ಲಿ ಸೋಮವಾರ ಭಾರಿ ಸ್ಫೋಟ ಸಂಭವಿಸಿ, ಏಳು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನಗರದಲ್ಲಿ ಶಸ್ತ್ರಚಿಕಿತ್ಸಾ ಸೌಲಭ್ಯ ನೀಡುತ್ತಿರುವ ಇಟಲಿಯ ವೈದ್ಯಕೀಯ ದತ್ತಿ ಸಂಸ್ಥೆ ತಿಳಿಸಿದೆ.

ರಾಜಧಾನಿ ಶಹರ್–ಇ–ನೌ ಜಿಲ್ಲೆಯಲ್ಲಿರುವ ರೆಸ್ಟೋರೆಂಟ್ನಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.

‘ಸ್ಫೋಟದಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಏಳು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ, ಗಾಯಗೊಂಡವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಇಟಲಿಯ ಎನ್ಜಿಒ ‘ಎಮರ್ಜೆನ್ಸಿ’ ತಿಳಿಸಿದೆ.

ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಮಗು ಕೂಡ ಸೇರಿದೆ ಎಂದು ಸಂಸ್ಥೆಯ ಅಫ್ಗಾನ್ ನಿರ್ದೇಶಕ ಡೆಜನ್ ಪಾನಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.