ಬೆಂಗಳೂರು: ಹಿಮಚ್ಚಾದಿತ ಸುಂದರ ಬೆಟ್ಟ–ಗುಡ್ಡಗಳಿಗೆ ಹೆಸರಾದ ಸ್ವಿಟ್ಜರ್ಲೆಂಡ್ನಲ್ಲಿ ಕಣಿವೆ ಪರಿಸರದ ಹಳ್ಳಿ ಪಟ್ಟಣಗಳು ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಲಿವೆ ಎಂಬುದಕ್ಕೆ ತಾಜಾ ಸಾಕ್ಷಿ ಸಿಕ್ಕಿದೆ.

ಮೇ 27 ರಂದು ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವಾದ ಆಲ್ಪ್ಸ್ ಪರ್ವತಗಳ ಕಣಿವೆ ಭಾಗದಲ್ಲಿರುವ ಹಿಮಚ್ಚಾದಿತ ಬೆಟ್ಟ ಕುಸಿದು ಬ್ಲಾಟೆನ್ ಎಂಬ ಸುಂದರ ಹಳ್ಳಿಯೊಂದು ನೆಲಸಮವಾಗಿದೆ.

ಬ್ಲಾಟೆನ್ ಎಂಬ ಹಳ್ಳಿಯ ಮೇಲೆ ಹಿಮಚ್ಚಾದಿತ ಬೆಟ್ಟ ಕುಸಿಯುತ್ತಿರುವುದು ಹಾಗೂ ಕುಸಿದ ನಂತರ ಆ ಹಳ್ಳಿ ಬಹುತೇಕ ಮಣ್ಣಿನಡಿ ಸಿಕ್ಕು ಮಾಯವಾಗಿರುವ ಫೋಟೊ, ವಿಡಿಯೊಗಳು ಗಮನ ಸೆಳೆದಿವೆ.

ಇಷ್ಟುದೊಡ್ಡ ದುರಂತವಾದರೂ ಘಟನೆಯಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿರುವುದನ್ನು ಬಿಟ್ಟರೆ ಯಾರಿಗೂ ಏನೂ ತೊಂದರೆ ಆಗಿಲ್ಲ. ಏಕೆಂದರೆ ಈ ಭಾಗದಲ್ಲಿ ಭೂಕುಸಿತ ಆಗಬಹುದು ಎಂದು ಮೇ 19ರಂದೇ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರಿಂದ ಬ್ಲಾಟೆನ್ ಹಳ್ಳಿಯಲ್ಲಿನ ಸುಮಾರು 300ಕ್ಕೂ ಹೆಚ್ಚು ಜನರನ್ನು ಮನೆ ಖಾಲಿ ಮಾಡಿಸಲಾಗಿತ್ತು. ಕಾಣೆಯಾಗಿರುವ ಒಬ್ಬ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಸ್ಥಳೀಯ ಮೇಯರ್ ಬಿಬಿಸಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ತಮ್ಮ ಹಳ್ಳಿ ಹಾಗೂ ಅದರಲ್ಲಿನ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ.

‘ಕನಸಿನಲ್ಲೂ ಕಾಣದ, ಊಹಿಸಲೂ ಆಗದ ದುರಂತ ನಡೆದಿದೆ. ನಮ್ಮ ಹಳ್ಳಿಯನ್ನು ಕಳೆದುಕೊಂಡಿರಬಹುದು ಆದರೆ, ನಮ್ಮ ಹೃದಯವನ್ನಲ್ಲ.. ಸಂತ್ರಸ್ತರ ಜೊತೆ ನಾವಿದ್ದೇವೆ. ಪರಿಹಾರ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ದೌಡಾಯಿಸಿದೆ. ಹಳ್ಳಿಯನ್ನು ಪುನರ್ ನಿರ್ಮಾಣ ಮಾಡುತ್ತೇವೆ’ ಎಂದು ಮೇಯರ್ ಮಥಿಯಾಸ್ ಬೆಲ್ವಾಲ್ಡ್ ಹೇಳಿದ್ದಾರೆ.

2017 ರಲ್ಲಿ ಸ್ವಿಟ್ಜರ್ಲೆಂಡ್ನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಬೊಂಡೊ ಎಂಬ ಹಳ್ಳಿಯ ಮೇಲೆ ಕೆಟ್ಟ ಪರಿಣಾಮ ಆಗಿತ್ತು. ಆಗ 8 ಜನ ಮೃತಪಟ್ಟಿದ್ದರು. ಸ್ವಿಟ್ಜರ್ಲೆಂಡ್ನಲ್ಲಿ ಕಳೆದ 100 ವರ್ಷಗಳಲ್ಲಿ ಸಂಭವಿಸಿದ್ದ ದೊಡ್ಡ ಭೂಕುಸಿತ ಅದಾಗಿತ್ತು.

ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯ ಸ್ವಿಟ್ಜರ್ಲೆಂಡ್ನ ಸುಂದರ ಪರಿಸರದ ಮೇಲೂ ಮಾರಕ ಪರಿಣಾಮ ಬೀರುತ್ತಿದೆ. ಆಲ್ಪ್ಸ್ ಪರ್ವತಗಳ ಬಳಿ ವಾಸಿಸುತ್ತಿರುವವರಿಗೆ ಸಂಕಷ್ಟ ತಪ್ಪಿದ್ದಲ್ಲ. ಬ್ಲಾಟೆನ್ ರೀತಿಯ ಘಟನೆಗಳನ್ನು ಇನ್ಮುಂದೆ ಪದೇ ಪದೇ ನೋಡಬಹುದು ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.