ಕೊಲಂಬೊ: ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನಾಕ್ರೋಶಕ್ಕೆ ಮಣಿದಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಸ್ಥಾನದಿಂದ ತನ್ನ ಅಣ್ಣ ಮಹಿಂದಾ ರಾಜಪಕ್ಸ ಅವರ ಪದಚ್ಯುತಿಗೆ ಒಪ್ಪಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಹೊಸ ಅಭ್ಯರ್ಥಿ ಹಾಗೂ ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಹೊಸ ಸಂಪುಟದ ಆಯ್ಕೆಗಾಗಿ ರಾಷ್ಟ್ರೀಯ ಸಮಿತಿಯನ್ನು ರಚಿಸಲೂ ತೀರ್ಮಾನಿಸಿದ್ದಾರೆ.

ಅಧ್ಯಕ್ಷರ ಜೊತೆಗಿನ ಸಭೆಯ ನಂತರ ಸಂಸದ ಮೈತ್ರಿಪಾಲ ಸಿರಿಸೇನಾ ಅವರು ಈ ವಿಷಯ ತಿಳಿಸಿದರು. ಸಿರಿಸೇನಾ ಅವರು ರಾಜಪಕ್ಸಗೂ ಮೊದಲು ಶ್ರೀಲಂಕಾದ ಅಧ್ಯಕ್ಷರಾಗಿದ್ದರು.

ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಸರ್ಕಾರ, ಬಾಕಿ ಇರುವ ವಿದೇಶಿ ಸಾಲ ಪಾವತಿಸದೇ ಅಮಾನತ್ತಿನಲ್ಲಿಡಲು ನಿರ್ಧರಿಸಿದೆ.ವಿದೇಶಿ ಸಾಲದ ಮೊತ್ತ ಹೆಚ್ಚಿರುವುದು ಆಮದು ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು, ಜನತೆ ಆಹಾರ ಪದಾರ್ಥಗಳು, ಇಂಧನ, ಅಡುಗೆ ಅನಿಲ, ಔಷಧಗಳಿಗೆ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಅಧ್ಯಕ್ಷ ಗೋಟಬಯ, ಪ್ರಧಾನಿ ಮಹಿಂದಾ ಒಳಗೊಂಡಂತೆ ರಾಜಪಕ್ಸ ಕುಟುಂಬವು ಶ್ರೀಲಂಕಾದ ರಾಜಕಾರಣದಲ್ಲಿ ಕಳೆದ 20 ವರ್ಷಗಳಿಂದ ಪ್ರಾಬಲ್ಯ ಹೊಂದಿದೆ. ಈ ಕುಟುಂಬದ ವಿರುದ್ಧ ಈಗ ಜನಾಕ್ರೋಶ ವ್ಯಕ್ತವಾಗಿದೆ. ಅಧ್ಯಕ್ಷ ಮತ್ತು ಪ್ರಧಾನಿ ನಿವಾಸದ ಎದುರು ಹಲವು ದಿನಗಳಿಂದ ಜನರು ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಭಾರತೀಯ ಹೈಕಮಿಷನರ್ ಭೇಟಿ;ಪರಿಸ್ಥಿತಿ ವಿವರಿಸಿದ ನಿಯೋಗ
ಕೊಲಂಬೊ (ಪಿಟಿಐ): ಶ್ರೀಲಂಕಾದ ಆಡಳಿತಾರೂಢ ಎಸ್‌ಎಲ್‌ಪಿಪಿ ಮೈತ್ರಿ ಪಕ್ಷದ ನಿಯೋಗವು ಭಾರತೀಯ ಹೈಕಮಿಷನರ್ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಕುರಿತು ವಿವರಣೆ ನೀಡಿದೆ.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇತೃತ್ವದ ನಿಯೋಗ ಹೈಕಮಿಷನರ್ ಗೋಪಾಲ ಬಾಗಲಯ ಅವರನ್ನು ಭೇಟಿಯಾಗಿತ್ತು ಎಂದು ಎಸ್‌ಎಲ್‌ಎಫ್‌ಪಿ ಮೈತ್ರಿಯ ಪ್ರಧಾನ ಕಾರ್ಯದರ್ಶಿ ದಯಸಿರಿ ಜಯಶೇಖರ ತಿಳಿಸಿದರು.

‘ಮಧ್ಯಂತರ ಸರ್ಕಾರ ರಚಿಸುವ ಚಿಂತನೆ ಇದೆ. ಇದು ಅಧಿಕಾರವನ್ನು ಹಂಚಿಕೊಳ್ಳುವ ಉದ್ದೇಶದಿಂದಲ್ಲ, ಬದಲಿಗೆ ದೇಶವನ್ನು ಈಗಿನ ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಗುರಿಯನ್ನು ಹೊಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.