ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photos| ಲೆಬೆನಾನ್ ರಾಜಧಾನಿ ಬೈರೂತ್‌ ಸ್ಫೋಟದ ಭೀಕರತೆ ವಿವರಿಸುವ ಚಿತ್ರಗಳು

ಬೈರೂತ್: ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಮಂಗಳವಾರ ಸ್ಫೋಟಗೊಂಡುರಾಜಧಾನಿಯ ಬಹುತೇಕ ಭಾಗಗಳನ್ನು ಧ್ವಂಸಗೊಳಿಸಿದೆ ಎಂದು ಪ್ರಧಾನಿ ಹಸನ್ ಡಯಾಬ್ ಹೇಳಿದ್ದಾರೆ.ಪ್ರಧಾನಿಯ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರರು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೋದಾಮಿನಲ್ಲಿ ಕಳೆದ ಆರು ವರ್ಷಗಳಿಂದ 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಲಾಗಿತ್ತು. ಇದು ಕ್ಷಮಾರ್ಹವಲ್ಲ ಎಂದು ರಕ್ಷಣಾ ಮಂಡಳಿ ಸಭೆಯಲ್ಲಿ ಪ್ರಧಾನಿ ಹೇಳಿರುವುದಾಗಿ ತಿಳಿಸಿದ್ದಾರೆ.ಮಂಗಳವಾರ ಸಂಭವಿಸಿರುವ ಸ್ಫೋಟದಲ್ಲಿ ಈವರೆಗೆ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3,700ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 30 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸ್ಫೋಟವು ಇಡೀ ಬೈರೂತ್ ನಗರವನ್ನೇ ಅಲುಗಾಡಿಸಿದ್ದು, ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟ ಸಂಭವಿಸಿರುವ ಸುತ್ತ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಕೂಡ ಹಲವು ಜನ ಸಿಲುಕಿದ್ದಾರೆ. ಬಂದರು ಪ್ರದೇಶದಲ್ಲಿದ್ದ ಗೋದಾಮುಗಳ ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ.ಚಿತ್ರಗಳು: ಎಎಫ್‌ಪಿ ಮತ್ತು ವಿವಿಧ ಏಜೆನ್ಸಿಗಳು
Published : 5 ಆಗಸ್ಟ್ 2020, 12:27 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT