‘ಒಂದೇ ಒಂದು ಬೆಂಕಿ ಅವಘಡವು ಯುರೋಪಿನ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣವನ್ನು ಹೇಗೆ ಮುಚ್ಚಿಸಲು ಸಾಧ್ಯ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ’ ಎಂದು ಬ್ರಿಟನ್ ಸರ್ಕಾರ ಹೇಳಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಪ್ರಧಾನಿ ಸ್ಟಾರ್ಮರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಲ್ದಾಣಕ್ಕೆ ಆಗಿದ್ದೇನು?
ಲಂಡನ್‌ನ ಹೇಯ್ಸನ್‌ನಲ್ಲಿ ರಾತ್ರಿ 11:23ಕ್ಕೆ ಭಾರಿ ಬೆಂಕಿ ಕಾಣಿಸಿದ್ದರಿಂದ ಹತ್ತಿರದ ಮನೆ, ಕಟ್ಟಡಗಳಲ್ಲಿದ್ದ ಸುಮಾರು 150 ಜನರನ್ನು ಸ್ಥಳಾಂತರಿಸಲಾಯಿತು. ರಾತ್ರೋ ರಾತ್ರಿ ಸುಮಾರು ಒಂದು ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡವು. 10 ಅಗ್ನಿಶಾಮಕ ಯಂತ್ರಗಳು ಮತ್ತು ಹಲವು ಮಂದಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
‘ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಸವಾಲಿನ ಪರಿಸ್ಥಿತಿಗಳಲ್ಲಿ ದಣಿವರಿಯದೆ ಕೆಲಸ ಮಾಡಿದ್ದಾರೆ. ಬೆಳಿಗ್ಗೆ 8ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ’ ಎಂದು ಲಂಡನ್ ಅಗ್ನಿಶಾಮಕ ದಳದ ಸಹಾಯಕ ಆಯುಕ್ತ ಪ್ಯಾಟ್ ಗೌಲ್ಬೌರ್ನ್ ತಿಳಿಸಿದರು.