ಲಂಡನ್: ಮಹಾತ್ಮ ಗಾಂಧಿ ಅವರ ಚಿನ್ನ ಲೇಪಿತ ಕನ್ನಡಕ ಸುಮಾರು ₹2.54 ಕೋಟಿಗೆ (3,40,000 ಡಾಲರ್) ಮಾರಾಟವಾಗಿದೆ ಎಂದು ಬ್ರಿಟನ್‌ನ ಹರಾಜು ಸಂಸ್ಥೆ ತಿಳಿಸಿದೆ.

‘ನಾಲ್ಕು ವಾರಗಳ ಹಿಂದೆ ನಾವದನ್ನು ಕಂಡುಕೊಂಡಿದ್ದೆವು. ತಮ್ಮ ಚಿಕ್ಕಪ್ಪನಿಗೆ ಗಾಂಧಿಯವರು ನೀಡಿದ್ದ ಆ ಕನ್ನಡಕವನ್ನು ವ್ಯಕ್ತಿಯೊಬ್ಬರು ನೀಡಿದ್ದರು’ ಎಂದು ಕನ್ನಡಕ ಮಾರಾಟವಾದ ಬಳಿಕ ‘ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್’ ಸಂಸ್ಥೆಯು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

‘ಅಪೂರ್ವ ವಸ್ತುವೊಂದಕ್ಕೆ ಬಿಡ್‌ನಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ! ಬಿಡ್‌ನಲ್ಲಿ ಭಾಗಿಯಾದವರಿಗೆಲ್ಲ ಧನ್ಯವಾದಗಳು’ ಎಂದು ‘ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್’ ಬರೆದುಕೊಂಡಿದೆ.

ಗಾಂಧಿಯವರು ಹಳೆಯ ಅಥವಾ ತಮಗೆ ಬೇಡವೆನಿಸಿದ ವಸ್ತುಗಳನ್ನು ಅಗತ್ಯ ಇರುವವರಿಗೆ ಮತ್ತು ಸಹಾಯ ಮಾಡಿದವರಿಗೆ ನೀಡುತ್ತಿದ್ದರು. ಈ ಕನ್ನಡಕವನ್ನು ದಕ್ಷಿಣ ಆಫ್ರಿಕಾದಲ್ಲಿ 1920–30ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.