ಕ್ವಾಲಾಲಂಪುರ: ‘ಮಲೇಷ್ಯಾ ಪ್ರಧಾನಿ ಮುಹಿದ್ದೀನ್ ಯಾಸೀನ್ ನೇತೃತ್ವದ ಸಚಿವ ಸಂಪುಟವು ಸೋಮವಾರ ತನ್ನ ರಾಜೀನಾಮೆ ಪತ್ರವನ್ನು ರಾಜನಿಗೆ ಸಲ್ಲಿಸಿದೆ’ ಎಂದು ವಿಜ್ಞಾನ ಸಚಿವ ಖೈರಿ ಜಮಾಲುದ್ದೀನ್ ಅವರು ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮುಹಿದ್ದೀನ್ ಯಾಸೀನ್ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಯಾಸೀನ್ ಅವರು ಇಂದು ಬೆಳಿಗ್ಗೆ ಅರಮನೆಗೆ ಭೇಟಿ ನೀಡಿದ್ದರು ಎಂದು ವರದಿಯೊಂದು ಹೇಳಿದೆ.

ಯಾಸೀನ್ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಲಭ್ಯವಿಲ್ಲ. ಆದರೆ, ಕೋವಿಡ್ ಪಿಡುಗು ಮತ್ತು ಆರ್ಥಿಕ ಕುಸಿತದ ನಡುವೆ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ.

ಮಲೇಷ್ಯಾದ ರಾಜ ಔಪಚಾರಿಕವಾಗಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಮುಹಿದ್ದೀನ್ ಯಾಸೀನ್ ಅವರು ಚುನಾವಣೆಯಿಲ್ಲದೆಯೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.