ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿಗೆ ಡೈವೋರ್ಸ್ ನೀಡಿ ಬಂಗಿ ಜಂಪ್ ಮೂಲಕ ಸಂಭ್ರಮಿಸಲು ಹೋದ ಗಂಡ! ಮುಂದೆ ಆಗಿದ್ದೇನು?

ಬಂಗಿ ಜಂಪ್ ಎನ್ನುವುದು ಎತ್ತರವಾದ ಸ್ಥಳದಿಂದ ಎಲಾಸ್ಟಿಕ್ ಬೆಲ್ಟ್ ಕಟ್ಟಿಕೊಂಡು ಪ್ರಪಾತಕ್ಕೆ ಜಿಗಿಯುವ ಒಂದು ಸಾಹಸ ಕ್ರೀಡೆಯಾಗಿದೆ.
Published 6 ಮೇ 2023, 5:44 IST
Last Updated 6 ಮೇ 2023, 5:44 IST
ಅಕ್ಷರ ಗಾತ್ರ

ಬ್ರೆಜಿಲ್: ಹೆಂಡತಿಗೆ ವಿಚ್ಛೇದನ (ಡಿವೋರ್ಸ್) ನೀಡಿ ಅದನ್ನು ಸಂಭ್ರಮಿಸಲು ಹೋದ ಯುವಕನೊಬ್ಬ 70 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾನೆ

ಈ ಘಟನೆ ಬ್ರೆಜಿಲ್‌ನ ಕ್ರಾಂಪೊ ಮಾಂಗ್ರೊ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

ರಫಾಲೆ ಸಾಂಟೊಸ್ ಎನ್ನುವ 27 ವರ್ಷದ ಯುವಕ ಇತ್ತೀಚೆಗೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದ. ಬಳಿಕ ತಾನು ವಿಚ್ಛೇದನ ನೀಡಿರುವುದನ್ನು ಸಂಭ್ರಮಿಸಬೇಕು ಎಂದು 70 ಅಡಿ ಎತ್ತರದಿಂದ ಬಂಗಿ ಜಂಪ್ ಮಾಡಲು ಹೋಗಿದ್ದ. ಈ ವೇಳೆ ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ ಎಂದು ದಿ ಮಿರರ್ ವೆಬ್‌ಸೈಟ್ ವರದಿ ಮಾಡಿದೆ.

ಬಂಗಿ ಜಂಪ್ ಎನ್ನುವುದು ಎತ್ತರವಾದ ಸ್ಥಳದಿಂದ ಎಲಾಸ್ಟಿಕ್ ಬೆಲ್ಟ್ ಕಟ್ಟಿಕೊಂಡು ಪ್ರಪಾತಕ್ಕೆ ಜಿಗಿಯುವ ಒಂದು ಸಾಹಸ ಕ್ರೀಡೆಯಾಗಿದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ನಟಿಯೊಬ್ಬರು ತಮ್ಮ ಗಂಡನಿಗೆ ವಿಚ್ಚೇಧನ ನೀಡಿ ಸಂಭ್ರಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT