ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿ: ಹಳ್ಳಿಗಳ ಮೇಲೆ ಬಂದೂಕುಧಾರಿಗಳ ದಾಳಿ, 21 ನಾಗರಿಕರ ಹತ್ಯೆ

Published 20 ಆಗಸ್ಟ್ 2023, 3:19 IST
Last Updated 20 ಆಗಸ್ಟ್ 2023, 3:19 IST
ಅಕ್ಷರ ಗಾತ್ರ

ಬಮಾಕೊ (ಮಾಲಿ): ಮಧ್ಯ ಮಾಲಿಯ ಮಾಪ್ಟಿ ಪ್ರದೇಶದ ಹಳ್ಳಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಕನಿಷ್ಠ 21 ನಾಗರಿಕರನ್ನು ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಅಪರಿಚಿತ ಗುಂಪೊಂದು ಏಕಾಏಕಿ ಹಳ್ಳಿಗೆ ನುಗ್ಗಿ ದಾಳಿ ನಡೆಸಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ವರದಿ ತಿಳಿಸಿದೆ. 

ಪಶ್ಚಿಮ ಆಫ್ರಿಕಾದ ರಾಷ್ಟ್ರವು ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ನ ಸಂಪರ್ಕದಿಂದಾಗಿ ಹಿಂಸಾತ್ಮಕ ದಂಗೆಯನ್ನು ಎದುರಿಸುತ್ತಿದೆ, ಅದರಲ್ಲೂ 2012 ರಲ್ಲಿ ಟುವಾರೆಗ್ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ಗುಂಪು ನಡೆಸಿದ ದಂಗೆಯ ನಂತರ ದಾಳಿಗಳ ಪ್ರಮಾಣವೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT