ವಿಶ್ವಸಂಸ್ಥೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಸೋಮವಾರ ನಡೆದಿದೆ.

‘ಸಂಘರ್ಷದಲ್ಲಿ ಮಕ್ಕಳು’ ಎಂಬ ವಿಚಾರವನ್ನು ಪ್ರಧಾನವಾಗಿಸಿ ಈ ಸಭೆ ನಡೆಸಲಾಗಿದೆ. ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಅಮೆರಿಕ ಕೈ ಜೋಡಿಸಿರುವ ನಡುವೆಯೇ ಈ ಸಭೆ ನಡೆದಿರುವುದು ಮಹತ್ವ ಪಡೆದಿದೆ. ಜತೆಗೆ ಸಂಘರ್ಷದ ವಿಚಾರವಾಗಿ ಮೆಲಾನಿಯಾ ಏನು ಹೇಳಲಿದ್ದಾರೆ ಎಂಬುದು ಎಲ್ಲರ ಗಮನ ಸೆಳೆದಿದೆ.

ಭದ್ರತಾ ಮಂಡಳಿಯ ಸಭೆಗೆ ಅಮೆರಿಕದ ಪ್ರಥಮ ಮಹಿಳೆ ಅಧ್ಯಕ್ಷತೆ ವಹಿಸುತ್ತಿರುವುದು ಇದೇ ಮೊದಲು. ಸಭೆಗೆ ಅಧ್ಯಕ್ಷತೆ ವಹಿಸುವ ಈ ಬಾರಿಯ ಸರದಿ ಅಮೆರಿಕದ್ದಾಗಿರುವುದರಿಂದ ಮೆಲಾನಿಯಾ ಅವರಿಗೆ ಈ ಅವಕಾಶ ದೊರೆತಿದೆ.

ವಿಶ್ವಸಂಸ್ಥೆಯ ಕೇಂದ್ರ ಕಚೇರಿಗೆ ಆಗಮಿಸಿದ ಮೆಲಾನಿಯಾ ಅವರನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟೆರಸ್ ಅವರು ಸ್ವಾಗತಿಸಿದ್ದಾರೆ. ಬಳಿಕ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿ, ‘ಸಂಘರ್ಷದಲ್ಲಿ ಮಕ್ಕಳು, ತಂತ್ರಜ್ಞಾನ, ಶಿಕ್ಷಣ’ ಎಂಬ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.