ಎಪಿ

ವಾಷಿಂಗ್ಟನ್: ‘ಮಕ್ಕಳು ಮತ್ತು ಅವರ ಮುಗ್ಧತೆಯು ದೇಶಗಳ ಗಡಿ, ಸರ್ಕಾರ ಮತ್ತು ಸಿದ್ಧಾಂತಕ್ಕಿಂತ ಮಿಗಿಲಾಗಿರುತ್ತದೆ’ ಎಂದು ಅಮೆರಿಕದ ಪ್ರಥಮ ಮಹಿಳೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರಿಗೆ ಪತ್ರ ಬರೆದಿದ್ದಾರೆ. ಶುಕ್ರವಾರ ನಡೆದ ಮಾತುಕತೆ ವೇಳೆ ಟ್ರಂಪ್ ಅವರು ಈ ಪತ್ರವನ್ನು ಪುಟಿನ್ ಅವರಿಗೆ ನೀಡಿದ್ದಾರೆ.

ಉಕ್ರೇನ್ ಹೆಸರನ್ನು ಪ್ರಸ್ತಾಪಿಸದೆ, ಮೆಲಾನಿಯಾ ಅವರು ಈ ಪತ್ರ ಬರೆದಿದ್ದಾರೆ. ಯುದ್ಧದಲ್ಲಿ ಬಂಧಿ ಮಾಡಿಕೊಂಡಿರುವ ಮಕ್ಕಳ ಕುರಿತು ಪತ್ರದಲ್ಲಿ ಪ್ರಸ್ತಾಪಿಸಿರುವ ಮೆಲಾನಿಯಾ, ‘ಮಕ್ಕಳ ನಗುವಿನ ನಾದವನ್ನು ನೀವು ಒಬ್ಬರೇ ಮರಳಿ ಸೃಷ್ಟಿಸಲು ಸಾಧ್ಯವಿದೆ. ನೀವು ಈ ಮಕ್ಕಳ ಮುಗ್ಧತೆಯನ್ನು ರಕ್ಷಿಸುವ ಮೂಲಕ ರಷ್ಯಾಗೆ ಮಾತ್ರವಲ್ಲ ಮಾನವತೆಗೇ ಸಲ್ಲಿಸುವ ಸೇವೆಯಾಗಿದೆ’ ಎಂದು ಬರೆದಿದ್ದಾರೆ.

‘ನೀವು ನಿಮ್ಮ ಲೇಖನಿಯಿಂದ ಒಂದೇ ಒಂದು ಸಾಲು ಬರೆದರೆ ಸಾಕು, ಈ ಮಕ್ಕಳನ್ನು ರಕ್ಷಿಸಬಹುದು’ ಎಂದೂ ಬರೆದಿದ್ದಾರೆ. ಪುಟಿನ್ ಅವರಿಗೆ ಪತ್ರ ಬರೆದಿರುವುದು ವಿನೂತನ ಪ್ರಯೋಗ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಪತ್ರದ ಪ್ರತಿಯು ‘ಫಾಕ್ಸ್ ನ್ಯೂಸ್’ಗೆ ಮೊದಲು ದೊರಕಿತು. ಬಳಿಕ ಈ ಪತ್ರವನ್ನು ಈ ಸುದ್ದಿಸಂಸ್ಥೆ ತನ್ನ ಜಾಲತಾಣದಲ್ಲಿ ಹಂಚಿಕೊಂಡಿತು. ಟ್ರಂಪ್ ಅವರ ಬೆಂಬಲಿಗರು ಇದನ್ನು ಇನ್ನಷ್ಟು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.