ಪರಮಾಣು ಒಪ್ಪಂದ ಮಾತುಕತೆಗೆ ಇರಾನ್ ಸ್ಪಂದಿಸದ ಕಾರಣ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಇಂದು ದಾಳಿ ನಡೆಸಿವೆ. ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದೆ. ಈ ಘಟನೆಗಳು ಮಧ್ಯಪ್ರಾಚ್ಯದಾದ್ಯಂತ ತೀವ್ರತರವಾದ ಅಸ್ತವ್ಯಸ್ತತೆಗೆ ಕಾರಣವಾಗಿವೆ.

ಇರಾನ್ ಮತ್ತು ಇಸ್ರೇಲ್ ಯುದ್ಧದಿಂದ ಏನೆಲ್ಲಾ ತೊಂದರೆ ?

ವಿಮಾನಯಾನ ಮತ್ತು ಸಾರಿಗೆ ಸ್ಥಗಿತ: ಇರಾನ್ ಮತ್ತು ಇಸ್ರೇಲ್ ಯುದ್ಧದಿಂದ ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ಕಡೆಗಳಲ್ಲಿ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇಸ್ರೇಲ್, ಇರಾನ್, ಇರಾಕ್, ಜೋರ್ಡಾನ್, ಯುಎಇ ಮತ್ತು ಸಿರಿಯಾ ಸೇರಿದಂತೆ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿವೆ. ಏರ್ ಇಂಡಿಯಾ, ಇಂಡಿಗೋ, ಎಮಿರೇಟ್ಸ್ ಮತ್ತು ಕತಾರ್ ಏರ್ವೇಸ್ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯಕ್ಕೆ ವಿಮಾನಯಾನವನ್ನು ಸ್ಥಗಿತಗೊಳಿಸಿವೆ. ಇದರಿಂದ ಜಗತ್ತಿನಾದ್ಯಂತ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಜಾಗತಿಕ ಇಂಧನ ಮತ್ತು ಮಾರುಕಟ್ಟೆಗೆ ಹೊಡೆತ: ಜಗತ್ತಿನ ಬಹುಪಾಲು ಇಂಧನ ಪೂರೈಕೆಯನ್ನು ಮಧ್ಯಪ್ರಾಚ್ಯ ದೇಶಗಳು ಮಾಡುತ್ತವೆ. ಈ ದೇಶಗಳಲ್ಲಿನ ಘರ್ಷಣೆಗಳ ನೇರಪರಿಣಾಮವು ಇಂಧನ ಮಾರುಕಟ್ಟೆಯ ಮೇಲಾಗುತ್ತದೆ. ಇಸ್ರೇಲ್ ದಾಳಿಯ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 72.48 ಡಾಲರ್ಗೆ ಏರಿಕೆಯಾಗಿದೆ. ಭಾರತದ ಕಚ್ಚಾ ತೈಲ ಆಮದಿನ ಪೂರೈಕೆಯ ಮೇಲೂ ಶೇ.50ರಷ್ಟು ತೊಂದರೆಯಾಗಲಿದೆ.

ಸಂವಹನ ಮತ್ತು ನಾಗರಿಕರ ಮೇಲಿನ ಪರಿಣಾಮ: ಯುದ್ಧದ ಪರಿಸ್ಥಿತಿಯ ನೇರಪರಿಣಾಮವು ನಾಗರಿಕರ ಮೇಲಾಗುತ್ತದೆ. ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆದಿರುವುದರಿಂದ ಇರಾನ್ನ ಬಹುತೇಕ ಕಡೆಗಳಲ್ಲಿ ಇಂಟರ್ನೆಟ್ ಸಂಪರ್ಕವು ಕಡಿತಗೊಂಡಿದೆ ಎಂದು ವರದಿಯಾಗಿದೆ. ಇಸ್ರೇಲ್ ಸರ್ಕಾರವು ಕೂಡ ‘ತುರ್ತು ಪರಿಸ್ಥಿತಿ’ ಘೋಷಿಸಿದೆ. ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದ್ದು, ಹಲವಾರು ಆಸ್ಪತ್ರೆಗಳು ತಮ್ಮ ಕಾರ್ಯಾಚರಣೆಯನ್ನು ಭೂಗತ ಸೌಲಭ್ಯಗಳಿಗೆ ಸ್ಥಳಾಂತರಿಸಿವೆ.

ಮಾರುಕಟ್ಟೆ ಅಸ್ಥಿರತೆ: ಇರಾನ್ ಮತ್ತು ಇಸ್ರೇಲ್ ಯುದ್ಧದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇರಾನ್ನ ಟೆಹರಾನ್ ಷೇರು ಮಾರುಕಟ್ಟೆ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.

(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.