ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು‌: ಸಚಿವರು, ವಿಜ್ಞಾನಿಗಳ ಕಳವಳ

ಹೆಚ್ಚುತ್ತಿರುವ ಕೊರೊನಾ ಸೋಂಕು
Last Updated 8 ಸೆಪ್ಟೆಂಬರ್ 2020, 13:23 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯು ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಅಲ್ಲಿನ ಸಚಿವರು ಹಾಗೂ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ನಲ್ಲಿ ಸೋಮವಾರ ಹೊಸದಾಗಿ 2,948 ಕೊರೊನಾ ಪ್ರಕರಣಗಳು ವರದಿಯಾಗಿವೆ.

‘ಕೊರೊನಾ ವೈರಾಣು ಇನ್ನೂ ನಮ್ಮೊಂದಿಗಿದೆ. ಹೀಗಾಗಿ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಸೋಂಕಿತರ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಎಲ್ಲರೂ ಮತ್ತಷ್ಟು ಜಾಗೃತರಾಗಿರಬೇಕು’ ಎಂದು ಗೃಹ ಕಾರ್ಯದರ್ಶಿ ರಾಬರ್ಟ್‌ ಜೆನ್‌ರಿಕ್‌ ಹೇಳಿದ್ದಾರೆ.

‘‌ಯುವಕರೆ ನೀವು ಹೆಚ್ಚು ಎಚ್ಚರದಿಂದಿರಿ. ನೀವು ಸೋಂಕಿತರಾಗುವ ಮೂಲಕ ಮನೆಯ ಇತರ ಸದಸ್ಯರನ್ನು ಅಪಾಯಕ್ಕೆ ತಳ್ಳಬೇಡಿ. ನಿಮ್ಮಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ ಅದು ಮನೆಯ ಇತರ ಸದಸ್ಯರಿಗೂ ತಗುಲಬಹುದು. ಹೀಗಾಗಿ ತುಂಬಾ ಹುಷಾರಾಗಿರಿ’ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮ್ಯಾಟ್‌ ಹ್ಯಾನ್‌ಕಾಕ್‌ ಹೇಳಿದ್ದರು.

‘ಜನರಲ್ಲಿ ಮೊದಲಿದ್ದ ಭಯ ದೂರವಾಗಿದೆ. ಕೋವಿಡ್‌ನಿಂದ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಎಲ್ಲರೂ ಇನ್ನು ಮುಂದೆಯೂ ಮೊದಲಿನಷ್ಟೇ ಎಚ್ಚರದಿಂದ ಇರಬೇಕು’ ಎಂದು ಇಂಗ್ಲೆಂಡ್‌ನ ವೈದ್ಯಾಧಿಕಾರಿ ಜೊನಾಥನ್‌ ವಾನ್‌ ಟಾಮ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT