ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಲ್‌ನಪಿರವಿರ್: ಕೋವಿಡ್‌ ಚಿಕಿತ್ಸೆಗೆ ಮಾತ್ರೆ, ಬ್ರಿಟನ್‌ನಿಂದ ಮೊದಲ ಅನುಮೋದನೆ

Last Updated 4 ನವೆಂಬರ್ 2021, 11:41 IST
ಅಕ್ಷರ ಗಾತ್ರ

ಲಂಡನ್‌: ಸಾಂಕ್ರಾಮಿಕ ರೋಗ ಕೋವಿಡ್‌ ಚಿಕಿತ್ಸೆಗಾಗಿ ‘ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್’ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮಾತ್ರೆಯ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ.

ಕೋವಿಡ್‌ ವಿರುದ್ಧದ ಮಾತ್ರೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿ ಬ್ರಿಟನ್‌ ಹೊರಹೊಮ್ಮಿದೆ.

ಕೋವಿಡ್‌ ಪಾಸಿಟಿವ್‌ ಮತ್ತು ರೋಗ ಲಕ್ಷಣಗಳು ಕಂಡು ಬಂದ ಐದು ದಿನಗಳ ಒಳಗಾಗಿ ‘ಮೊಲ್‌ನಪಿರವಿರ್’ ಎಂಬ ಹೆಸರಿನ ಈ ಔಷಧವನ್ನು ಬಳಸಬೇಕು ಎಂದು ‘ಮೆಡಿಸಿನ್ಸ್ ಅಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ)’ ಶಿಫಾರಸು ಮಾಡಿದೆ.

ಈ ಔಷಧವನ್ನು ಯಾವ ಸಮಯದಲ್ಲಿ, ಹೇಗೆ ನೀಡಬೇಕು ಎಂಬುದನ್ನು ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆ ತಿಳಿಸಲಿದೆ.

ಈ ವರ್ಷದ ಅಂತ್ಯದ ವೇಳೆಗೆ ಔಷಧಿಯ ಒಂದು ಕೋಟಿ ಕೋರ್ಸ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. 2022ರ ವೇಳೆಗೆ ಕನಿಷ್ಠ 2 ಕೋಟಿ ಕೋರ್ಸ್‌ ತಯಾರಿಸಲು ಉದ್ದೇಶಿಸಲಾಗುತ್ತಿದೆ ಎಂದು ಔಷಧ ತಯಾರಿಕಾ ಸಂಸ್ಥೆ ‘ಮೆರ್ಕ್‌’ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT