ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಜ್‌ ಯಾತ್ರೆ: 1,300ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಾವು

Published 24 ಜೂನ್ 2024, 3:29 IST
Last Updated 24 ಜೂನ್ 2024, 3:29 IST
ಅಕ್ಷರ ಗಾತ್ರ

ಕೈರೋ: ಈ ಬಾರಿಯ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 1,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಈ ವರ್ಷ ಅಂದಾಜು 1.8 ಮಿಲಿಯನ್ ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಂಡಿದ್ದರು. ಅವರಲ್ಲಿ 1.6 ಮಿಲಿಯನ್ ವಿದೇಶಗಳಿಂದ ಬಂದವರು.

ಯಾತ್ರೆಯ ಸಂದರ್ಭದಲ್ಲಿ ಮೃತಪಟ್ಟ 1,300ಕ್ಕೂ ಹೆಚ್ಚು ಜನರ ಪೈಕಿ ಶೇ 83ರಷ್ಟು ಮಂದಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ. ಹಾಗಾಗಿ ಅವರಿಗೆ ಸೂರು ಹಾಗೂ ಮೂಲ ಸೌಕರ್ಯ ಸಿಕ್ಕಿಲ್ಲ. ಅಧಿಕ ತಾಪಮಾನದಿಂದಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ 660ಕ್ಕೂ ಹೆಚ್ಚು ಮಂದಿ ಈಜಿಪ್ಟಿನವರು ಎಂದು ಸೌದಿ ಅರೇಬಿಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT