ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾದಲ್ಲಿ ಜ್ವಾಲಾಮುಖಿ: 2,100 ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Published 20 ಏಪ್ರಿಲ್ 2024, 12:42 IST
Last Updated 20 ಏಪ್ರಿಲ್ 2024, 12:42 IST
ಅಕ್ಷರ ಗಾತ್ರ

ಮನಾಡೊ: ಇಂಡೊನೇಷ್ಯಾದ ಸುಲವೆಸಿ ದ್ವೀಪ ಪ್ರದೇಶದಲ್ಲಿ ‘ಮೌಂಟ್ ರಾಂಗ್’ ಜ್ವಾಲಾಮುಖಿಯ ಕಾರಣದಿಂದಾಗಿ ಈ ಪ್ರದೇಶದಲ್ಲಿದ್ದ 2,100ಕ್ಕೂ ಹೆಚ್ಚು ಮಂದಿಯನ್ನು ಶುಕ್ರವಾರ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 

ಜ್ವಾಲಾಮುಖಿಯ ಪರಿಣಾಮ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಸಲಾಗಿದೆ. 

ಶುಕ್ರವಾರ ಮಧ್ಯಾಹ್ನದಿಂದ ಗರಿಷ್ಠ 3900 ಅಡಿ ಎತ್ತರದವರೆಗೆ ಕನಿಷ್ಠ ಮೂರು ಬಾರಿ ಸ್ಫೋಟಗಳು ಸಂಭವಿಸಿರುವುದು ಇಂಡೊನೇಷ್ಯಾದ ಜ್ವಾಲಾಮುಖಿ ಕೇಂದ್ರ ಮತ್ತು ಭೂ ವೈಜ್ಞಾನಿಕ ಹಾನಿ ತಡೆಯ ಕೇಂದ್ರದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. 

ಜ್ವಾಲಾಮುಖಿಯ ಬೂದಿಯು ಪಶ್ಚಿಮ, ಆಗ್ನೇಯ, ಈಶಾನ್ಯ, ವಾಯುವ್ಯ ಭಾಗದಲ್ಲಿ ವ್ಯಾಪಿಸುತ್ತಿರುವುದು ಹವಾಮಾನ ಇಲಾಖೆ, ಹವಾಮಾನ ಶಾಸ್ತ್ರ, ಭೌತಶಾಸ್ತ್ರ ಏಜೆನ್ಸಿಗಳಲ್ಲಿ ದಾಖಲಾಗಿರುವುದು ಸ್ಯಾಟಲೈಟ್ ಚಿತ್ರಗಳಲ್ಲಿ ಕಂಡುಬಂದಿದೆ ಎಂದು ಇಂಡೊನೇಷ್ಯಾ ಸಾರಿಗೆ ಇಲಾಖೆ ತಿಳಿಸಿದೆ. 

‘ಮೌಂಟ್ ರಾಂಗ್’ ಜ್ವಾಲಮುಖಿಯ ಬೂದಿ ಗಾಳಿಯಿಂದ ವ್ಯಾಪಿಸುವ ಸಾಧ್ಯತೆ ಇರುವ ಕಾರಣ ಈ ಸ್ಥಳದಿಂದ 100 ಕಿ.ಮೀ. ಗೂ ಕಡಿಮೆ ಅಂತರದಲ್ಲಿರುವ ಮನಡೊ ನಗರದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT