ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ ಬೆಂಕಿಗಾಹುತಿಯಾಗಿದ್ದರೂ ‘ಹಳದಿ ಜಾಕೆಟ್’ ಪ್ರತಿಭಟನೆ

Last Updated 19 ಏಪ್ರಿಲ್ 2019, 19:06 IST
ಅಕ್ಷರ ಗಾತ್ರ

ಪ್ಯಾರಿಸ್‌:ಇಲ್ಲಿನ ಇತಿಹಾಸ ಪ್ರಸಿದ್ಧ ನಾಟ್ರೆ ಡೇಮ್ ಚರ್ಚ್‌ ಅಗ್ನಿ ಆಕಸ್ಮಿಕದಿಂದ ಹಾನಿಗೊಳಗಾಗಿದ್ದರೂ ‘ಹಳದಿ ಜಾಕೆಟ್‌ ಪ್ರತಿಭಟನಾಕಾರರು’ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.

ಇಂಧನ ಬೆಲೆ ಏರಿಕೆ, ಜೀವನ ನಿರ್ವಹಣೆ ವೆಚ್ಚ ಏರಿಕೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಫ್ರಾನ್ಸ್‌ನಲ್ಲಿ ಕಳೆದ ವರ್ಷದ ನವೆಂಬರ್‌ನಿಂದ ‘ಹಳದಿ ಜಾಕೆಟ್‌ ಪ್ರತಿಭಟನೆ’ ನಡೆಯುತ್ತಿದೆ.

ಪ್ರಸಿದ್ಧ ಚರ್ಚ್‌ನ ಪುನರ್‌ ನಿರ್ಮಾಣಕ್ಕೆ ಪ್ರತಿಭಟನಾಕಾರರು ಈಗಾಗಲೇ ಧನಸಹಾಯವನ್ನೂ ಮಾಡಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಮಾನ್ಯುಯೆಲ್ ಮಾಕ್ರೋನ್‌ ಅವರು ಚರ್ಚ್‌ ಪುನರ್ ನಿರ್ಮಾಣದ ಬಗ್ಗೆ ಮಾತ್ರವೇ ಮಾತನಾಡಿದ್ದಾರೆ. ಆದರೆ ತಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ ಎಂದು ‍ಪ್ರತಿಭಟನಾಕಾರರು ದೂರಿದ್ದಾರೆ.

ಚರ್ಚ್‌ ಪುನರ್‌ ನಿರ್ಮಾಣಕ್ಕೆ ಮಾತ್ರ ಕೋಟ್ಯಂತರ ನೆರವು ಹರಿದುಬರುತ್ತಿದೆ. ಆದರೆ ನಮ್ಮ ಬೇಡಿಕೆಗಳ ಬಗ್ಗೆ ಯಾರೂ ಗಮನಹರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT