‘ಪಾಕಿಸ್ತಾನದ ಭಿಕ್ಷುಕರು ಯಾತ್ರೆಗೆ (ಜಿಯಾರತ್) ತೆರಳುವುದಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುತ್ತಾರೆ. ಈ ಪೈಕಿ ಬಹುತೇಕ ಜನರು ‘ಉಮ್ರಾಹ್’ ವೀಸಾದಡಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಭಿಕ್ಷೆ ಬೇಡುತ್ತಾರೆ‘ ಎಂದು ಸಂಸತ್ ಕಾರ್ಯದರ್ಶಿ (ಸಾಗರೋತ್ತರ ಪಾಕಿಸ್ತಾನಿಯರ ವಿಭಾಗ) ಜೀಶನ್ ಖಾನ್‌ಜಾದಾ ಅವರು ಸಾಗರೋತ್ತರ ಪಾಕಿಸ್ತಾನಿಯರಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.