ಢಾಕಾ: ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಜನಪ್ರಿಯಗೊಳಿಸಿದ್ದ ‘ಜೊಯ್ ಬಾಂಗ್ಲಾ’ ಅನ್ನು ‘ರಾಷ್ಟ್ರೀಯ ಘೋಷಣೆ’ ಎಂಬುದಾಗಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

‘ಜೊಯ್ ಬಾಂಗ್ಲಾ’ವನ್ನು ರಾಷ್ಟ್ರೀಯ ಘೋಷಣೆ ಎಂಬುದಾಗಿ ಹೈಕೋರ್ಟ್ 2020ರ ಮಾರ್ಚ್ 10ರಂದು ತೀರ್ಪು ನೀಡಿತ್ತು.

ರೆಹಮಾನ್ ಅವರ ಪುತ್ರಿ ಶೇಖ್ ಹಸೀನಾ ಅವರನ್ನು ಆ.5ರಂದು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಅಸ್ತಿತ್ವಕ್ಕೆ ಬಂದಿರುವ ಮಧ್ಯಂತರ ಸರ್ಕಾರವು ಈ ಘೋಷಣೆ ಕುರಿತ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿ ಡಿ.2ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.

ರಾಷ್ಟ್ರೀಯ ಘೋಷಣೆಯು ಸರ್ಕಾರದ ನೀತಿ ನಿರ್ಧಾರದ ವಿಷಯವಾಗಿದೆ ಮತ್ತು ಈ ವಿಷಯದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೈಯದ್ ರೆಫಾತ್ ಅಹ್ಮದ್ ನೇತೃತ್ವದ ನಾಲ್ವರು ನ್ಯಾಯಮೂರ್ತಿಗಳು ಇದ್ದ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

‘ಸುಪ್ರೀಂ ಕೋರ್ಟ್ನ ಪೀಠದ ಈ ಆದೇಶದ ನಂತರ ‘ಜೊಯ್ ಬಾಂಗ್ಲಾ’ ಅನ್ನು ರಾಷ್ಟ್ರೀಯ ಘೋಷಣೆಯಾಗಿ ಪರಿಗಣಿಸಲಾಗುವುದಿಲ್ಲ’ ಎಂದು ವಿಚಾರಣೆ ವೇಳೆ, ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಟಾರ್ನಿ ಜನರಲ್ ಅನೀಕ್ ಆರ್ ಹಕ್ ತಿಳಿಸಿದರು.

2022ರ ಫೆ.20 ರಂದು ಹಸೀನಾ ನೇತೃತ್ವದ ಸಂಪುಟ ಈ ವಾಕ್ಯವನ್ನು ರಾಷ್ಟ್ರೀಯ ಘೋಷಣೆ ಎಂದು ಘೋಷಿಸಿತ್ತು. ಅವಾಮಿ ಲೀಗ್ ಸರ್ಕಾರವು 2022ರ ಮಾ.2 ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.