ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಸಾಕಿ ಮೇಲಿನ ಅಣುಬಾಂಬ್‌ ದಾಳಿಗೆ 75 ವರ್ಷ

Last Updated 9 ಆಗಸ್ಟ್ 2020, 7:25 IST
ಅಕ್ಷರ ಗಾತ್ರ

ನಾಗಸಾಕಿ(ಜಪಾನ್‌): ಎರಡನೇ ಮಹಾಯುದ್ಧದ ಸಂದರ್ಭದಲ್ಲಿನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್‌ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮನಡೆಯಿತು.

ಅಮೆರಿಕ 1945 ಆ.6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್‌ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್‌ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.

ಜಪಾನ್‌ ಅಣುಬಾಂಬ್‌ ದಾಳಿಗೆ ಗುರಿಯಾದ ಏಕಮಾತ್ರ ರಾಷ್ಟ್ರವಾಗಿದೆ.ಈ ನಿಮಿತ್ತ ಕಾರ್ಯಕ್ರಮದಲ್ಲಿ ಅಣುಬಾಂಬ್‌ ದಾಳಿಯಲ್ಲಿ ಬದುಕುಳಿದವರು, ಅವರ ಸಂಬಂಧಿಕರು, ವಿದೇಶಿ ಪ್ರಮುಖರು ಭಾಗವಹಿಸಿದ್ದರು. ಬೆಳಿಗ್ಗೆ 11.02 ಕ್ಕೆ ಸರಿಯಾಗಿ ಮೌನ ಪ್ರಾರ್ಥನೆ ನಡೆದಿದ್ದು, ವಿಶ್ವಶಾಂತಿ ರಕ್ಷಣೆಗೆ ಕೋರಲಾಯಿತು.

‘ಕೊರೊನಾ ವೈರಾಣುಹರಡಲಾರಂಭಿಸಿದಾಗ ಮಾತ್ರ ನಾವು ಅದರ ಬಗ್ಗೆ ಭಯಪಡಲು ಆರಂಭಿಸಿದೆವು. ಅದೇ ರೀತಿ ಅಣುಬಾಂಬ್‌ನ ಪರಿಣಾಮ ಜನರಿಗೆ ಅರಿವಿಲ್ಲ. ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರ ಅದರ ನೋವು ನಮಗೆ ತಿಳಿಯುತ್ತದೆ’ ಎಂದು ನಾಗಸಾಕಿಯ ಮೇಯರ್‌ಟೋಮಿಹಿಸಾ ಟೌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT