ನ್ಯೂಯಾರ್ಕ್: ಮಂಗಳ ಗ್ರಹ ಅಧ್ಯಯನಕ್ಕಾಗಿ ನಾಸಾ ಉಡ್ಡಯನ ಮಾಡಿರುವ ‘ಪರ್ಸೆವೆರನ್ಸ್’ ರೋವರ್, ಅಲ್ಲಿನ ಆಗಸದಲ್ಲಿ ಹಸಿರು ವರ್ಣದ ಧ್ರುವಪ್ರಭೆಯನ್ನು (ಅರೋರಾ) ಪತ್ತೆ ಮಾಡಿದೆ.

ಅಂಗಾರಕನಲ್ಲಿ ಕಂಡುಬಂದಿರುವ ಈ ಧ್ರುವಪ್ರಭೆ ಬರಿಗಣ್ಣಿಗೆ ಕಾಣಲಿದೆ ಎಂಬುದು ವಿಶೇಷ. ಹೀಗಾಗಿ, ಭವಿಷ್ಯದಲ್ಲಿ ಅಂತರಿಕ್ಷಯಾನ ಕೈಗೊಳ್ಳುವ ಗಗನಯಾತ್ರಿಗಳು ಮಂಗಳ ಗ್ರಹದಲ್ಲಿನ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಭೂಮಿ ಹೊರತುಪಡಿಸಿದಂತೆ, ಸೌರಮಂಡಲದ ಬೇರೆ ಗ್ರಹದಲ್ಲಿ ಇದೇ ಮೊದಲ ಬಾರಿಗೆ ಧ್ರುವಪ್ರಭೆಯನ್ನು ಪತ್ತೆ ಮಾಡಿದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಂಗಳನಲ್ಲಿ ಉತ್ತರ ಧ್ರುವಪ್ರಭೆ ಮತ್ತು ದಕ್ಷಿಣ ಧ್ರುವಪ್ರಭೆ ಕಂಡುಬರುವುದನ್ನು ಮುಂಚಿತವಾಗಿಯೇ ಪತ್ತೆ ಮಾಡುವುದು ಸಾಧ್ಯ ಎಂಬುದನ್ನು ಈ ಅಧ್ಯಯನ ದೃಢಪಡಿಸಿದೆ. ಇದು, ಬಾಹ್ಯಾಕಾಶ ವಾತಾವರಣ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಒಸ್ಲೊ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನಿ ಎಲೀಸ್ ರೈಟ್ ನಟ್ಸೆನ್ ಹೇಳುತ್ತಾರೆ.

ಅವರ ಸಂಶೋಧನಾ ವರದಿ ‘ಸೈನ್ಸ್ ಅಡ್ವಾನ್ಸಸ್’ ನಿಯತಕಾಲಿಕದಲ್ಲಿ ಬುಧವಾರ ಪ್ರಕಟವಾಗಿದೆ.

‘ದೂಳಿನ ಕಣಗಳಿಂದಾಗಿ ಈ ಧ್ರುವಪ್ರಭೆಯ ಹೊಳಪು ಕ್ಷೀಣಿಸಿತ್ತು. ಈ ಕಣಗಳು ಇಲ್ಲದಿದ್ದರೆ ಹಾಗೂ ಉತ್ತಮ ಗೋಚರಕ್ಕೆ ಅನುಕೂಲಕರ ವಾತಾವರಣ ಇದ್ದಾಗ, ಭವಿಷ್ಯದಲ್ಲಿ ಗಗನಯಾನಿಗಳು ಈ ಧ್ರುವಪ್ರಭೆಯನ್ನು ಸ್ಪಷ್ಟವಾಗಿ ನೋಡಬಹುದು’ ಎಂದು ಸಂಶೋಧಕರು ಹೇಳಿದ್ದಾರೆ.

‘ಪರ್ಸೆವೆರನ್ಸ್’ ರೋವರ್ಅನ್ನು 2020ರಲ್ಲಿ ಉಡ್ಡಯನ ಮಾಡಲಾಗಿದೆ. 2021ರಿಂದ ಈ ರೋವರ್, ಮಂಗಳ ಗ್ರಹದ ಜೆಜೆರೊ ಕುಳಿ (ಜೆಜೆರೊ ಕ್ರೇಟರ್) ಕುರಿತು ಅಧ್ಯಯನ ನಡೆಸುತ್ತಿದೆ. ಅಲ್ಲಿನ ದೂಳು ಹಾಗೂ ಶಿಲೆಯ ಮಾದರಿಗಳನ್ನು ಈ ರೋವರ್ ಮರಳಿ ಭೂಮಿಗೆ ತರಲಿದೆ.

ಜೆಜೆರೊ ಕುಳಿಯು ಈ ಹಿಂದೆ ಸರೋವರವಾಗಿತ್ತು. ಮಂಗಳ ಗ್ರಹದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಸೂಕ್ಷ್ಮಾಣುಜೀವಿಗಳು ಇದ್ದವು ಎಂಬುದಕ್ಕೆ ಈ ಕುಳಿ ಪುರಾವೆಯಾಗಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.