ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್ ರಾಜನಾಗಿ ಫೆಡ್ರಿಕ್‌ ಅಧಿಕಾರ ಸ್ವೀಕಾರ

Published 14 ಜನವರಿ 2024, 15:42 IST
Last Updated 14 ಜನವರಿ 2024, 15:42 IST
ಅಕ್ಷರ ಗಾತ್ರ

ಕೋಪೆನ್‌ಹೇಗನ್ (ಎಎಫ್‌ಪಿ): ಡೆನ್ಮಾರ್ಕ್‌ನ ರಾಣಿ ಮಾರ್ಗರೇತ್ ಭಾನುವಾರ ಅಧಿಕಾರ ತ್ಯಜಿಸಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ಗ್ರಹಣ ಮಾಡಿದರು. ಈ ಮೂಲಕ ಡೆನ್ಮಾರ್ಕ್‌ನಲ್ಲಿ ಹೊಸ ಯುಗಾರಂಭವಾಗಿದೆ.

ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಗಳಿಗೆಗೆ ಲಕ್ಷಾಂತರ ಜನರು ಸಾಕ್ಷಿಯಾದರು. ಇದಕ್ಕೂ ಮೊದಲು ರಾಣಿ ಮಾರ್ಗರೇತ್‌ ಕೋಪನ್‌ಹೇಗನ್‌ನ ಪ್ರಮುಖ ರಸ್ತೆಗಳಲ್ಲಿ ಕುದುರೆ ಸಾರೋಟಿನಲ್ಲಿ ಸಾಗಿ ಅರಮನೆ ತಲುಪಿದರು. ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿದ್ದ ಅಸಂಖ್ಯಾತ ನಾಗರಿಕರು ಕೈಬೀಸಿ ಈ ಸಂದರ್ಭಕ್ಕೆ ಸಾಕ್ಷಿಯಾದರು. 

ಕ್ರಿಸ್ತಿಯಾನ್ಸ್‌ಬರ್ಗ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇತ್, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕಿದರು. ಈ ಮೂಲಕ 52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗ ಅಂತ್ಯವಾದರೆ, ರಾಜನಾಗಿ ಅವರ 55 ವರ್ಷ ವಯಸ್ಸಿನ ಅವರ ಪುತ್ರ ಫೆಡ್ರಿಕ್‌ ಅವರ ಅಧಿಕಾರವಧಿ ಆರಂಭಗೊಂಡಿತು. 

ಬಳಿಕ ರಾಣಿ ಮಾರ್ಗರೇತ್ ಅವರು ಸಚಿವ ಸಂಪುಟದಿಂದ ನಿರ್ಗಮಿಸಿದರು. ರಾಜ ಫೆಡ್ರಿಕ್, ಅವರ ಪತ್ನಿ, ಅವರ 18 ವರ್ಷದ ಪುತ್ರನಾದ ನೂತನ ರಾಜಕುಮಾರ ಈ ಸಂದರ್ಭದಲ್ಲಿ ಇದ್ದರು. ‘ರಾಜನಿಗೆ ದೇವರು ಒಳ್ಳೆಯದು ಮಾಡಲಿ’ ಎಂಬ ಹಾರೈಕೆ ಹಾಗೂ ಆನಂದಭಾಷ್ಪದೊಂದಿಗೆ ರಾಣಿ ನಿರ್ಗಮಿಸಿದರು.

ಫೆಡ್ರಿಕ್ ಅವರು ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿರುವುದನ್ನು ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಅರಮನೆಯ ಮಹಡಿಯಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ರಾಣಿ ಮೇರಿ ಅವರು ಇದ್ದರು. ಆಸ್ಟ್ರೇಲಿಯಾದಲ್ಲಿ ಜನಿಸಿದ ಮೇರಿ, ಈ ಮೂಲಕ ಡೆನ್ಮಾರ್ಕ್‌ನ ರಾಣಿಯಾದ ಪ್ರಥಮ ಸಾಮಾನ್ಯಪ್ರಜೆ ಎಂಬ ಹಿರಿಮೆಗೂ ಪಾತ್ರರಾದರು.

‘ನನ್ನಂತಹ ಸಾಮಾನ್ಯ ಪ್ರಜೆ ರಾಣಿ ಆಗುವುದೇ ನನ್ನನ್ನು ಭಾವೋದ್ವೇಗೊಳಿಸುತ್ತಿದೆ’ ಎಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಿಂದ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜ್ಯೂಡಿ ಲ್ಯಾಂಗ್‌ಟ್ರೀ ಅವರು ಪ್ರತಿಕ್ರಿಯಿಸಿದರು.

ಡೆನ್ಮಾರ್ಕ್‌ ರಾಜನಾಗಿ ಫೆಡ್ರಿಕ್‌ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಭಾನುವಾರ ಕೋಪನ್‌ಹೇಗನ್‌ನ ಕ್ರಿಸ್ತಿಯಾನ್ಸ್‌ಬರ್ಗ್‌ ಸ್ಕ್ವೈರ್‌ನಲ್ಲಿ ಸೇರಿದ್ದ ಜನಸ್ತೋಮ (ಎಎಫ್‌ಪಿ ಚಿತ್ರ)
ಡೆನ್ಮಾರ್ಕ್‌ ರಾಜನಾಗಿ ಫೆಡ್ರಿಕ್‌ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಭಾನುವಾರ ಕೋಪನ್‌ಹೇಗನ್‌ನ ಕ್ರಿಸ್ತಿಯಾನ್ಸ್‌ಬರ್ಗ್‌ ಸ್ಕ್ವೈರ್‌ನಲ್ಲಿ ಸೇರಿದ್ದ ಜನಸ್ತೋಮ (ಎಎಫ್‌ಪಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT