ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ನೆರವಿನ ಹೊಸ ಪ್ಯಾಕೇಜ್‌ ಶೀಘ್ರವೇ ಘೋಷಣೆ

ಮಾಸ್ಕೊ ಮೇಲೆ ಡ್ರೋನ್‌ ದಾಳಿ: ಐದು ಡ್ರೋನ್‌ ಹೊಡೆದುರುಳಿಸಿದ ರಷ್ಯಾ ಸೇನೆ
Published 31 ಮೇ 2023, 11:28 IST
Last Updated 31 ಮೇ 2023, 11:28 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಯುದ್ಧಪೀಡಿತ ಉಕ್ರೇನ್‌ಗೆ ಅಮೆರಿಕವು ಸುಮಾರು ₹2,482 ಕೋಟಿ ಮೊತ್ತದ ಸೇನಾ ನೆರವಿನ ಮತ್ತೊಂದು ಹೊಸ ಪ್ಯಾಕೇಜ್‌ ಅನ್ನು ಈ ವಾರದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಈ ಪ್ಯಾಕೇಜ್‌ನಲ್ಲಿ ಹೆಚ್ಚುವರಿಯಾಗಿ ಸ್ಫೋಟಕ ಡ್ರೋನ್‌ಗಳನ್ನು ಪೂರೈಸಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಮಾಸ್ಕೊ ಮೇಲೆ ಡ್ರೋನ್‌ಗಳ ದಾಳಿ ನಡೆದ ಬೆನ್ನಲ್ಲೇ, ಸ್ಫೋಟಕ ಡ್ರೋನ್‌ಗಳನ್ನು ಉಕ್ರೇನ್‌ಗೆ ಅಮೆರಿಕ ಪೂರೈಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಆದರೆ, ಹೊಸ ಪ್ಯಾಕೇಜ್‌ನಲ್ಲಿ ಯಾವ ರೀತಿಯ ಡ್ರೋನ್‌ಗಳು ಅಥವಾ ಯುದ್ಧ ಸಾಮಗ್ರಿಗಳು ಒಳಗೊಂಡಿವೆ ಎನ್ನುವ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.  

‘ಮಾಸ್ಕೊ ಮೇಲಿನ ಇತ್ತೀಚಿನ ದಾಳಿಗಳಲ್ಲಿ ಅಮೆರಿಕದ ಡ್ರೋನ್‌ಗಳು ಅಥವಾ ಯುದ್ಧಸಾಮಗ್ರಿ ಬಳಸಲು ಯಾವುದೇ ಸಲಹೆ ನೀಡಿಲ್ಲ. ರಷ್ಯಾ ನೆಲದ ಮೇಲಿನ ದಾಳಿಗೆ ಅಮೆರಿಕ ಪೂರೈಸಿದ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸದಿರಲು ಉಕ್ರೇನ್‌ ಒಪ್ಪಿಕೊಂಡಿದೆ’ ಎಂದು ಅಮೆರಿಕ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.  

ಮಾಸ್ಕೊ ಮೇಲಿನ ಡ್ರೋನ್‌ ದಾಳಿಯು, ಉಕ್ರೇನ್‌ಗೆ ನೀಡಲಾಗುತ್ತಿರುವ ಶಸ್ತ್ರಾಸ್ತ್ರ ನೆರವು ಪ್ಯಾಕೇಜ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಅವರು ಸಷ್ಟಪಡಿಸಿದ್ದಾರೆ.

ಎರಡನೇ ಬಾರಿಗೆ ಡ್ರೋನ್ ದಾಳಿ: ಮಾಸ್ಕೊ ಮೇಲೆ ಮಂಗಳವಾರ ನಡೆದಿರುವ ಡ್ರೋನ್‌ ದಾಳಿಯಲ್ಲಿ ಉಕ್ರೇನ್‌ ಕೈವಾಡವಿದೆ ಎಂದು ರಷ್ಯಾ ಅಧ್ಯಕ್ಷರ ಆಡಳಿತ ಕಚೇರಿ ಕ್ರೆಮ್ಲಿನ್ ಹೇಳಿದೆ.

‘ಇದು ಉಕ್ರೇನ್‌ನ ಭಯೋತ್ಪಾದನಾ ಕೃತ್ಯ’ ಎಂದು ಅಧ್ಯಕ್ಷ ಪುಟಿನ್‌ ಆರೋಪಿಸಿದ್ದಾರೆ. ಆದರೆ, ಇದಕ್ಕೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

‘ಮಾಸ್ಕೊದಲ್ಲಿ ಮಂಗಳವಾರ ಐದು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇನ್ನು ಮೂರು ಡ್ರೋನ್‌ಗಳ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಮೇ 3ರಿಂದ ಈವರೆಗೆ ಮಾಸ್ಕೊ ಮೇಲೆ ನಡೆದ ಎರಡನೇ ಡ್ರೋನ್‌ ದಾಳಿ ಇದು. ಕ್ರೆಮ್ಲಿನ್‌ ಮೇಲಿನ ಎರಡು ಡ್ರೋನ್‌ ದಾಳಿಗಳಲ್ಲಿ ಪುಟಿನ್‌ ಹತ್ಯೆ ಮಾಡುವ ಗುರಿಯನ್ನು ಉಕ್ರೇನ್‌ ಹೊಂದಿತ್ತು ಎಂದು ರಷ್ಯಾ ಶಂಕಿಸಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT