ನ್ಯೂಯಾರ್ಕ್: ನಯಾಗರ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ ಹಿಂದಿರುಗುತ್ತಿದ್ದ 54 ಪ್ರಯಾಣಿಕರಿದ್ದ ಪ್ರವಾಸಿ ಬಸ್ ಬಫಲೊ ಸಮೀಪದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಭಾರತೀಯ ಪ್ರಜೆ ಸೇರಿದಂತೆ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮೃತರನ್ನು ಬಿಹಾರದ ಶಂಕರ್ ಕುಮಾರ್ ಝಾ (65), ನ್ಯೂಜೆರ್ಸಿಯ ಪೂರ್ವ ಬ್ರನ್ಸ್ವಿಕ್ನ ಪಿಂಕಿ ಚಾಂಗ್ರಾನಿ (60), ಚೀನಾದ ಬೀಜಿಂಗ್ನ ಷಿ ಹಾಂಗ್ಝುವೊ (22), ನ್ಯೂಜೆರ್ಸಿಯ ಜೆರ್ಸಿ ನಗರದ ಜಾಂಗ್ ಕ್ಸಿಯೋಲನ್ (55), ಮತ್ತು ನ್ಯೂಜೆರ್ಸಿಯ ಜೆರ್ಸಿ ನಗರದ ಜಿಯಾನ್ ಮಿಂಗ್ಲಿ (56) ಎಂದು ಗುರುತಿಸಲಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಶುಕ್ರವಾರ ಮಧ್ಯಾಹ್ನ 12.22ರ ಸುಮಾರಿಗೆ ಅಂತರರಾಜ್ಯ ಹೆದ್ದಾರಿ 90ರ ಬಳಿ ಅಪಘಾತ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.

ನಯಾಗರ ಜಲಪಾತದ ಪ್ರವಾಸಕ್ಕೆ ತೆರಳಿದ್ದ ಬಸ್ ಹಿಂದಿರುಗುತ್ತಿತ್ತು. ಬಸ್ ಕಂನಿಯ ಇಬ್ಬರು ಸೇರಿದಂತೆ 54 ಮಮದಿ ಬಸ್ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಹುತೇಕ ಪ್ರಯಾಣಿಕರು ಭಾರತ, ಚೀನಾ ಮತ್ತು ಫಿಲಿಫೈನ್ಸ್ ಮೂಲದವರು ಎಂದು ವರದಿ ತಿಳಿಸಿದೆ.

ಅಪಘಾತದ ಬಳಿಕ ಸುಮಾರು 8 ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.