ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಾಳಿ ಸಾಮರ್ಥ್ಯ ತೀಕ್ಷ್ಣಗೊಳಿಸಲು ಕ್ರೂಸ್ ಕ್ಷಿಪಣಿ ಪರೀಕ್ಷೆ: ಉ.ಕೊರಿಯಾ

Published 31 ಜನವರಿ 2024, 2:47 IST
Last Updated 31 ಜನವರಿ 2024, 2:47 IST
ಅಕ್ಷರ ಗಾತ್ರ

ಸೋಲ್: ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪ್ರತಿದಾಳಿಯ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುವ ಗುರಿಯೊಂದಿಗೆ ದೀರ್ಘ ಶ್ರೇಣಿಯ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯಾ ಬುಧವಾರ ಹೇಳಿದೆ.

ಉತ್ತರ ಕೊರಿಯಾ ಒಂದು ತಿಂಗಳೊಳಗೆ ನಡೆಸಿದ್ದ ಮೂರು ಕ್ರೂಸ್ ಕ್ಷಿಪಣಿ ಪರೀಕ್ಷೆಗಳನ್ನು ದಕ್ಷಿಣ ಕೊರಿಯಾದ ಮಿಲಿಟರಿ ಪತ್ತೆ ಹಚ್ಚಿತ್ತು. ಇದರ ಬೆನ್ನಲ್ಲೇ ಉತ್ತರ ಕೊರಿಯಾದಿಂದ ಪ್ರತಿಕ್ರಿಯೆ ಬಂದಿದೆ.

ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರ ಪ್ರದರ್ಶನಗಳ ಸರಣಿ ಮುಂದುವರಿದಿದೆ. ಮಂಗಳವಾರ ಹಾರಿಸಿದ ಕ್ಷಿಪಣಿಯಿಂದ (Hwasal-2) ನೆರೆಹೊರೆಯ ರಾಷ್ಟ್ರಗಳ ಭದ್ರತೆ ಮೇಲೆ ಯಾವುದೇ ಭೀತಿ ಇರುವುದಿಲ್ಲ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ಉತ್ತರ ಕೊರಿಯಾ ನಡೆಸಿರುವ ಪರಮಾಣು ಸಾಮರ್ಥ್ಯದ ಕ್ಷಿಪಣಿಯ ವ್ಯಾಪ್ತಿ ಸುಮಾರು 2,000 ಕಿ.ಮೀ. ಆಗಿದೆ. ಇದು ಜಪಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಳೆದ ಕೆಲವು ವರ್ಷಗಳಿಂದ ಕ್ರೂಸ್ ಕ್ಷಿಪಣಿಗಳ ಶ್ರೇಣಿಯನ್ನು ಉತ್ತರ ಕೊರಿಯಾ ವಿಸ್ತರಿಸುತ್ತಿದೆ. ನೆಲ ಹಾಗೂ ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸುತ್ತಿದೆ. 2021ರಿಂದ ಇಂತಹ 11 ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT