ಸೋಲ್: ಉತ್ತರ ಕೊರಿಯಾ ಸೋಮವಾರ ಖಂಡಾಂತರ ಕ್ಷಿಪಣಿ ‘ಹ್ವಾಸಾಂಗ್-12’ಯನ್ನು ಯಶಸ್ವಿಯಾಗಿ ಉಡಾಯಿಸಿರುವುದಾಗಿ ಹೇಳಿಕೊಂಡಿದೆ. ಇದರೊಂದಿಗೆ ಪರಮಾಣು ಸಜ್ಜಿತ ರಾಷ್ಟ್ರವು ದೂರಗಾಮಿ ಕ್ಷಿಪಣಿಗಳ ಪರೀಕ್ಷೆಗಳನ್ನು ಪುನರಾರಂಭಿಸಬಹುದೆಂಬ ಭೀತಿ ಆವರಿಸಿದೆ.

ಅಮೆರಿಕದ ಸುಪರ್ದಿಯಲ್ಲಿರುವ ದ್ವೀಪ ಗುವಾಮ್ಗೆ ಹಿಂದೊಮ್ಮೆ ಇದೇ ಅಸ್ತ್ರದಿಂದ ದಾಳಿಯ ಬೆದರಿಕೆ ಎದುರಾಗಿತ್ತು.

2017ರಲ್ಲಿ ಈ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.

ಉತ್ತರ ಕೊರಿಯಾದ ಖಂಡಾಂತರ ಕ್ಷಿಪಣಿಗಳು, ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳಿಗೆ ಈ ಕ್ಷಿಪಣಿ ಪರೀಕ್ಷೆಗಳು ಮುನ್ನುಡಿಯಂತಿವೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.

‘ಈ ಉಡಾವಣೆ ನಿನ್ನೆ ಮಾತ್ರವೇ ಆಗಿದ್ದಲ್ಲ. ಈ ತಿಂಗಳಲ್ಲಿ ಸಾಕಷ್ಟು ಸಂಖ್ಯೆಯ ಪರೀಕ್ಷೆಗಳು ನಡೆದಿವೆ. ಅದರ ನೆರಳಿನಲ್ಲೇ ಇದೂ ಆಗಿದೆ’ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ನಿರೀಕ್ಷೆಗಳಿಲ್ಲದೇ ನೇರ ಮಾತುಕತೆಗೆ ಬರುವಂತೆ ಉತ್ತರ ಕೊರಿಯಾವನ್ನು ಅಮೆರಿಕ ಒತ್ತಾಯಿಸಿದೆ.

'ಕೆಲವು ಗಂಭೀರ ಚರ್ಚೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ನಾವು ನಂಬುತ್ತೇವೆ’ ಎಂದು ಬೈಡೆನ್ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.